ಕಡೆಗೂ ಪತ್ನಿಯಿಂದ ಡಿವೋರ್ಸ್‌ ಪಡೆದ ಶೆಫ್‌ ಕುನಾಲ್‌ ಕಪೂರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸುಪ್ರಸಿದ್ಧ ಶೆಫ್‌ ಕುನಾಲ್‌ ಕಪೂರ್‌ ದಾಂಪತ್ಯ ಜೀವನ ಅಂತ್ಯವಾಗಿದೆ. ಪತ್ನಿಯ ದೌರ್ಜನ್ಯದಿಂದ ಬೇಸತ್ತು ಕುನಾಲ್‌ ಡಿವೋರ್ಸ್‌ ಫೈಲ್‌ ಮಾಡಿದ್ದರು. ಆದರೆ ಕೌಟುಂಬಿಕ ನ್ಯಾಯಲಯ ವಿಚ್ಛೇದನ ಮಂಜೂರು ಮಾಡಿರಲಿಲ್ಲ. ಇದನ್ನು ಪ್ರಶ್ನಿಸಿ ಕುನಾಲ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಿಚಾರಣೆ ಬಳಿಕ ಇದೀಗ ಕುನಾಲ್‌ಗೆ ಕೋರ್ಟ್‌ ವಿಚ್ಛೇದನ ಮಂಜೂರು ಮಾಡಿದೆ.

ಪತ್ನಿ ತನ್ನನ್ನು ಸಾರ್ವಜನಿಕವಾಗಿ ನಿಂದಿಸಿದ್ದಾಳೆ, ಅಪಮಾನ ಮಾಡಿದ್ದಾಳೆ, ಆಧಾರರಹಿತ ಆರೋಪಗಳನ್ನು ಮಾಡಿದ್ದಾಳೆ ಜೊತೆಗೆ ನನ್ನ ಪೋಷಕರನ್ನು ಗೌರವಿಸದೆ ನನ್ನ ಮೇಲೆ ಸದಾ ಅನುಮಾನದ ದೃಷ್ಟಿ ಹೊಂದಿದ್ದಳು ಎಂದು ಕುನಾಲ್‌ ಹೇಳಿದ್ದರು. ಈ ರೀತಿ ಪತ್ನಿ ನಡೆದುಕೊಳ್ಳುವುದು ಕ್ರೌರ್ಯಕ್ಕೆ ಸಮ ಎಂದು ಕೋರ್ಟ್‌ ಹೇಳಿದೆ. ಗಂಡನ ಬಗ್ಗೆ ಕನಿಷ್ಠ ಕರುಣೆಯೂ ಇಲ್ಲದಂತೆ ನಡೆದುಕೊಂಡಿದ್ದಾರೆ. ಅವರಿಬ್ಬರು ಒಟ್ಟಿಗೇ ಇರುವಂತೆ ಒತ್ತಾಯಿಸಲು ಆಗುವುದಿಲ್ಲ ಎಂದು ಕೋರ್ಟ್‌ ಹೇಳಿದೆ.

ಕುನಾಲ್‌ ಕಪೂರ್‌ ಹಾಗೂ ಏಕ್ತಾ ಕಪೂರ್‌ 2008 ರಲ್ಲಿ ಮದುವೆಯಾಗಿದ್ದರು. ಇವರಿಗೆ ಮಗ ಇದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!