ಶ್ರೀಲಂಕಾದ ಪರಿಸ್ಥಿತಿ ಭಾರತದಲ್ಲೂ ಬರುವುದೇ?: ಸರ್ವಪಕ್ಷ ಸಭೆಯಲ್ಲಿ ಸಚಿವ ಎಸ್​​. ಜೈಶಂಕರ್ ಮಾತು…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶ್ರೀಲಂಕಾ ಭೀಕರ ಆರ್ಥಿಕ ಬಿಕ್ಕಟ್ಟಿಗೊಳಗಾಗಿದೆ. ತುತ್ತು ಅನ್ನಕ್ಕಾಗಿ ಅಲ್ಲಿನ ಜನರು ಪರದಾಡುತ್ತಿದ್ದಾರೆ. ಈ ಚಾರವಾಗಿ ಇಂದುದೆಹಲಿಯಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿದ್ದು, ಕೇಂದ್ರ ವಿದೇಶಾಂಗ ಸಚಿವ ಎಸ್​​. ಜೈಶಂಕರ್ ಮಾತನಾಡಿದರು.

ನಮ್ಮ ನೆರೆಯ ರಾಷ್ಟ್ರದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ನಮ್ಮನ್ನು ಚಿಂತಿತರನ್ನಾಗಿ ಮಾಡಿದೆ. ಅಲ್ಲಿನ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಆದರೆ, ಶ್ರೀಲಂಕಾ ಜೊತೆ ಭಾರತದ ಹೋಲಿಕೆ ಮಾಡುವುದು ಸರಿಯಲ್ಲ ಎಂದರು.

ಭಾರತದಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸಲು ಸಾಧ್ಯವಿಲ್ಲ. ನಮ್ಮ ದೇಶಕ್ಕೆ ಬಲಿಷ್ಠವಾದ ನಾಯಕತ್ವವಿದೆ. ಆದಕಾರಣ ಭಾರತವನ್ನು ಶ್ರೀಲಂಕಾದಲ್ಲಿ ಪರಿಸ್ಥಿತಿಗೆ ಹೋಲಿಕೆ ಸರಿಯಲ್ಲ ಎಂದರು.

ಈ ಸಭೆಯಲ್ಲಿ ಎಐಎಡಿಎಂಕೆ, ತೃಣಮೂಲ ಕಾಂಗ್ರೆಸ್​, ನ್ಯಾಷನಲ್ ಕಾನ್ಫರೆನ್ಸ್​, ಆಮ್​ ಆದ್ಮಿ ಪಕ್ಷ, ಟಿಆರ್​ಎಸ್​, ಬಹುಜನ ಸಮಾಜ ಪಕ್ಷ, ವೈಎಸ್​​​ಆರ್​ ಕಾಂಗ್ರೆಸ್​, ಎಂಡಿಎಂಕೆ, ಕಾಂಗ್ರೆಸ್​ ಪಕ್ಷದ ಮುಖಂಡರು ಭಾಗಿಯಾಗಿದ್ದರು.

ಶ್ರೀಲಂಕಾ ಬಿಕ್ಕಟ್ಟಿನಿಂದಾಗಿ ತಮಿಳುನಾಡಿಗೆ ಅಲ್ಲಿನ ನಿರಾಶ್ರಿತರು ಹೆಚ್ಚಿನ ಪ್ರಮಾಣದಲ್ಲಿ ವಲಸೆ ಬರುತ್ತಿದ್ದಾರೆ. ಇದು ರಾಜ್ಯದಲ್ಲಿ ಸಮಸ್ಯೆ ಉಂಟುಮಾಡಿದೆ. ಹೀಗಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಜೈಶಂಕರ್​ ಅವರ ಬಳಿ ಕೆಲ ದಿನಗಳ ಹಿಂದೆ ಅರಿಕೆ ಮಾಡಿಕೊಂಡಿದ್ದರು. ಇದರ ಬೆನ್ನಲೇ ಸರ್ವಪಕ್ಷ ಸಭೆ ನಡೆಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!