August 27, 2026
Thursday, August 27, 2026
spot_img

ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದ ಚುಕ್ಕಾಣಿ ಹಿಡಿದ ವಿಲಿಯಮ್ ವಾಲ್ಷ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋಗೆ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವಿಲಿಯಮ್ ವಾಲ್ಷ್ ಅವರು ನೇಮಕಗೊಂಡಿದ್ದಾರೆ.

ಮಾರ್ಚ್ 10 ರಂದು ಇಂಡಿಗೋದ ಹಿಂದಿನ ಸಿಇಒ ಪೀಟರ್ ಎಲ್ಬರ್ಸ್ ಅವರು ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆ ಆ ಸ್ಥಾನಕ್ಕೆ ಬ್ರಿಟಿಷ್ ಏರ್ವೇಸ್​ನ ಮಾಜಿ ಮುಖ್ಯಸ್ಥ ವಿಲಿಯಮ್ ವಾಲ್ಷ್ ಅವರನ್ನು ಸಂಸ್ಥೆ ನೇಮಕಗೊಳಿಸಿದೆ.

ಪ್ರಸ್ತುತ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆಯ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ವಿಲಿಯಂ ವಾಲ್ಷ್ ಅವರ ಕಾರ್ಯ ಅವಧಿ ಜುಲೈ 31ಕ್ಕೆ ಮುಕ್ತಾಯಗೊಳ್ಳಲಿದ್ದು, ಅದಾದ ಬಳಿಕ ಆಗಸ್ಟ್ 3ರ ಒಳಗಾಗಿ ಇಂಡಿಗೋ ಸಂಸ್ಥೆಯ ಚುಕ್ಕಾಣಿ ಹಿಡಿಯಲಿದ್ದಾರೆ.

ವಿಲಿಯಂ ವಾಲ್ಷ್ ಅವರ ನೇಮಕಾತಿಯನ್ನುಇಂಡಿಗೋ ಅಧ್ಯಕ್ಷ ವಿಕ್ರಮ್ ಸಿಂಗ್ ಅವರು ಸ್ವಾಗತಿಸಿದ್ದು, ಅದ್ಭುತ ನಾಯಕತ್ವದ ಅನುಭವ ಹೊಂದಿರುವ ಅವರಿಂದ ಇಂಡಿಗೋವನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !