ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಎರಡು ದಿನದಿಂದ ಭಾರೀ ಮಳೆ ಸುರಿಯುತ್ತಿದ್ದು, ಬೆಸ್ಕಾ ವ್ಯಾಪ್ತಿಯಲ್ಲಿ 546 ಕಂಬಗಳು ಧರೆಗುರುಳಿವೆ.
ದುರಸ್ಥಿ ಕಾರ್ಯ ನಡೆಯುತ್ತಿದ್ದು, ಹಾನಿಯ ಅಂದಾಜು ಇನ್ನೂ ತಿಳಿದುಬಂದಿಲ್ಲ.
ಶನಿವಾರ ಬೆಂಗಳೂರು ನಗರ ಸೇರಿ ಬೆಸ್ಕಾಂ ವ್ಯಾಪ್ತಿಯ ಹಲವು ಭಾಗಗಳಲ್ಲಿ 142 ಕಂಬಗಳು ಮುರಿದುಬಿದ್ದಿವೆ, ಇನ್ನು ಭಾನುವಾರ 404 ಕಂಬಗಳು ಮುರಿದು ಬಿದ್ದಿದ್ದು, 44 ಟಿಸಿಗಳು ಹಾನಿಗೊಳಗಾಗಿವೆ.
ಮಳೆಯಿಂದಾಗ ಕಂಬಗಳು ಧರೆಗುರುಳಿದ್ದು, ವಿದ್ಯುತ್ ವ್ಯತ್ಯಯವಾಗಿದ್ದು, ಬೆಸ್ಕಾಂಗೆ ಸಾವಿರಾರು ಸಹಾಯವಾಣಿ ಕರೆಗಳು ಬಂದಿವೆ, ಭಾನುವಾರ ಒಟ್ಟು 44 ಸಾವಿರಕ್ಕೂ ಹೆಚ್ಚು ಕರೆಗಳು ಬಂದಿದ್ದು, 22 ಸಾವಿರದಷ್ಟು ದೂರು ದಾಖಲಾಗಿದೆ.
ಯೆಲ್ಲೋ ಅಲರ್ಟ್: ಮುಂದಿನ ನಾಲ್ಕು ದಿನಗಳು ರಾಜ್ಯದ ವಿವಿಧೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಬೆಂಗಳೂರು, ಚಿಕ್ಕಮಗಳೂರು, ಬೆಂ. ಗ್ರಾಮಾಂತರ, ಹಾಸನ ಹಾಗೂ ಕೊಡಗು ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಇದೀಗ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ಭಾರೀ ಮಳೆಯಾಗಲಿದೆ.