ಹೊಸದಿಗಂತ ವರದಿ,ವಿಜಯಪುರ:
ಸಾರಿಗೆ ಇಲಾಖೆಗೆ ರಾಜ್ಯ ಸರ್ಕಾರ 2 ಸಾವಿರ ಕೋಟಿಯಷ್ಟು ಸಾಲ ಕೊಡಿಸಿದೆ. ಈ 2 ಸಾವಿರ ಕೋಟಿ ಸಾಲ ರಾಜ್ಯ ಸರ್ಕಾರವೇ ಭರಿಸುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಶಕ್ತಿ ಯೋಜನೆಯಡಿ ರಾಜ್ಯ ಸರ್ಕಾರದಿಂದ ಸಾರಿಗೆ ಇಲಾಖೆಗೆ ಬರಬೇಕಾದ ಅನುದಾನ ಬಾಕಿ ಇರುವ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿ, ಎಷ್ಟು ಹಣ ಬಾಕಿಯಿದೆ ಎನ್ನುವುದು ತಿಳಿಸದೆ, ನಮ್ಮ ಇಲಾಖೆಗೆ ಹೊರೆ ಇಲ್ಲ. ಉಚಿತವಾಗಿ ರಾಜ್ಯ ಸರ್ಕಾರ ನಮಗೆ 2 ಸಾವಿರ ಕೋಟಿ ಕೊಟ್ಟಂತಾಯಿತು. ಮೋಟಾರ್ ವಾಹನ ಟ್ಯಾಕ್ಸ್ ಪ್ರತಿ ವರ್ಷ 7 ನೂರು ಕೋಟಿ ಇತ್ತು. ಎರಡು ವರ್ಷದಿಂದ ವಿನಾಯಿತಿ ಕೊಟ್ಟಿದ್ದಾರೆ ಎಂದರು.
ಉತ್ತರ ಕರ್ನಾಟಕದವರು ಸಿಎಂ ಆಗುವ ಯೋಗ ಇದೆ ಎಂದು ಕೋಡಿಮಠದ ಶ್ರೀಗಳ ಭವಿಷ್ಯಕ್ಕೆ ಪ್ರತಿಕ್ರಿಯಿಸಿ, ನನಗೆ ಭವಿಷ್ಯವಾಣಿಯಲ್ಲಿ ನಂಬಿಕೆ ಇಲ್ಲ. ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾದರೆ ಸಂತೋಷ ಎಂದರು.