ಕೊಡಗು‌, ಕೊಪ್ಪಳ ವಿವಿಧ ಜಿಲ್ಲೆಗಳಲ್ಲಿ ಗಾಳಿ ಮಳೆ: ರೈತರ ಮೊಗದಲ್ಲಿ ಮಂದಹಾಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಾಳಿ ಸಹಿತ ಭರ್ಜರಿ ಮಳೆಯಾಗುತ್ತಿದೆ. ಕೊಡಗು‌ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ (Karnataka Weather Forecast) ಮಳೆಯಾಗಿದೆ. ಮುಂಜಾನೆ ಮೋಡ‌ ಕವಿದ ವಾತಾವರಣವಿದ್ದು, ಸಂಜೆ‌ ಅಬ್ಬರದೊಂದಿಗೆ ಮಳೆ ಸುರಿಯುತ್ತಿದೆ. ಮಳೆಯಿಂದ ಕೊಡಗಿನ‌ ರೈತರು ಹಾಗೂ ಸಾರ್ವಜನಿಕರ ಮೊಗದಲ್ಲಿ ಮಂದಹಾಸ ಮೂಡಿದೆ.

ಇತ್ತ ಕೊಪ್ಪಳ ಜಿಲ್ಲೆಯ ಕೆಲವೆಡೆ ಮಳೆಯಾಗಿದೆ. ಬಿಸಿಲನಿಂದ ಕಂಗೆಟ್ಟ ಜನರಿಗೆ ಗಾಳಿ ಸಹಿತ ಮಳೆಯು ಅಬ್ಬರಿಸಿದೆ. ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನಲ್ಲಿ ಜೋರಾಗಿ ಮಳೆಯಾಗಿದೆ. ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಏರ್‌ಪೋರ್ಟ್‌ನಲ್ಲೂ ಉತ್ತಮ ಮಳೆಯಾಗಿದೆ. ಬೆಳಗ್ಗೆನಿಂದ ಬಿಸಿಲಿಗೆ ಕಂಗೆಟ್ಟಿದ್ದ ಏರ್‌ಪೋರ್ಟ್‌ ಪ್ರಯಾಣಿಕರು, ಟ್ಯಾಕ್ಸಿ ಚಾಲಕರು ಮಳೆ ಆಗಮನದಿಂದ ಖುಷಿಯಾದರು. ಮಳೆಗೆ ವಾತಾವರಣವು ಕೂಲ್‌ ಆಗಿತ್ತು.

ಹಂಪಿ ಪರಿಸರದಲ್ಲಿ ಸುರಿದ ಮಳೆಗೆ ಬಾಳೆ ಬೆಳೆ ಉರುಳಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ. ಗಾಳಿ, ಮಳೆಗೆ ಸಾವಿರಾರು ಬಾಳೆಗಿಡಗಳು ನೆಲಕ್ಕುರುಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here