Sunday, July 3, 2022

Latest Posts

ಅಮೆರಿಕದ ಈಶಾನ್ಯ ಭಾಗಕ್ಕೆ ಅಪ್ಪಳಿಸಿದ ಚಳಿಗಾಲದ ಚಂಡಮಾರುತ: 1,300 ವಿಮಾನ ಹಾರಾಟ ರದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಈಶಾನ್ಯ ಭಾಗದಲ್ಲಿ ಸಂಪೂರ್ಣ ಚಳಿಗಾಲದ ಚಂಡಮಾರುತ ಆವರಿಸಿದ್ದು, ಜನಜೀವನ ಅಸ್ವಸ್ಥವಾಗಿದೆ.ಚಳಿಗಾಲದ ಚಂಡಮಾರುತಗಳಿಂದ ನಿನ್ನೆ ಸುಮಾರು 1,300 ವಿಮಾನಗಳ ಹಾರಾಟ ರದ್ದುಗೊಂಡಿದೆ. ದೇಶಕ ಅನೇಕ ರಾಜ್ಯಗಳು ಈಗಾಗಲೇ ತುರ್ತು ಪರಿಸ್ಥಿತಿ ಘೋಷಿಸಿವೆ.

ಅಟ್ಲಾಂಟಿಕ್ ಸಾಗರದಲ್ಲಿ ಶೀತ ಚಂಡಮಾರುತ ರೂಪುಗೊಂಡಿದ್ದು, ನಿನ್ನೆ ಕೆರೊಲಿನಾಸ್ ಪ್ರದೇಶ ಪ್ರವೇಶಿಸಿದೆ. ತದನಂತರ ಉತ್ತರದ ಮೈನೆಗೆ ಪ್ರವೇಶಿಸಿದ್ದು, ಹಿಮಪಾತದ ಮುನ್ಸೂಚನೆ ನೀಡಲಾಗಿತ್ತು. ಈ ಕಾರಣದಿಂದ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ.

ನ್ಯೂಯಾರ್ಕ್ ಮತ್ತು ಬೋಸ್ಟನ್‌ನಂಥ ಪ್ರಮುಖ ನಗರಗಳಲ್ಲಿಯೂ ಹಿಮಪಾತವಾಗಿದ್ದು, ಒಟ್ಟಾರೆ ೯೫ ಸಾವಿರಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕವೂ ಇಲ್ಲದಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss