ʼಬೆಳದಿಂಗಳ ಕೆಲಸʼ ಮಾಡುತ್ತಿದ್ದ 300 ಉದ್ಯೋಗಿಗಳನ್ನು ವಜಾ ಮಾಡಿದ ವಿಪ್ರೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತದ ದಿಗ್ಗಜ ಕಂಪನಿಯಾಗಿರೋ ವಿಪ್ರೋ, ʼಬೆಳದಿಂಗಳು ಕೆಲಸʼ (Moonlighting) ಮಾಡುತ್ತಿರುವ ತನ್ನ ಉದ್ಯೋಗಿಗಳ ವಿರುದ್ಧ ಕಠಿಣ ನಿಲುವು ತಾಳಿದೆ. ಕಂಪನಿಯ ಉದ್ಯೋದ ಜೊತೆ ಇನ್ನೊಂದು ಕೆಲಸ ಮಾಡುತ್ತಿದ್ದ 300ಜನ ನೌಕರರನ್ನು ವಜಾಗೊಳಿಸಿದೆ.

ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್‌ಜಿ ಮಾತನಾಡಿ, ಕಳೆದ ಕೆಲವು ತಿಂಗಳುಗಳಲ್ಲಿ 300 ಜನರು ಮೂನ್‌ಲೈಟ್ನಿಂಗ್ ಮತ್ತು ಪ್ರತಿಸ್ಪರ್ಧಿ ಕಂಪನಿಗಳಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಕಂಪನಿಯು ಕಂಡುಹಿಡಿದಿದೆ, ಅಂತಹವರಿಗೆ ಕಂಪನಿಯಲ್ಲಿ ಸ್ಥಾನವಿಲ್ಲ ಎಂದು ಹೇಳಿದ್ದಾರೆ.

ಏನಿದು ಮೂನ್‌ ಲೈಟಿಂಗ್‌ ?

ಮೂನ್‌ಲೈಟಿಂಗ್ ಎಂದರೆ ಒಬ್ಬರ ಪೂರ್ಣ ಸಮಯದ ಕೆಲಸದ ಹೊರತಾಗಿ ಎರಡನೇ ಕೆಲಸ ಅಥವಾ ಅನೇಕ ಇತರ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು. ಇದರಡಿಯಲ್ಲಿ ಒಬ್ಬ ಕಂಪನಿಯ ಉದ್ಯೋಗಿಯು ತನ್ನ ಪ್ರಾಥಮಿಕ ಉದ್ಯೋಗದ ಜೊತೆಗೆ ಇನ್ನೊಂದು ಉದ್ಯೋಗವನ್ನು ಮಾಡುತ್ತಾನೆ.

ಕೆಲ ಕಂಪನಿಗಳು ಈ ಅಭ್ಯಾಸವನ್ನು ಬಹಿರಂಗವಾಗೇ ಒಪ್ಪಿಜಕೊಂಡಿವೆ. ಕೆಲವು ಕಂಪನಿಗಳು ತನ್ನ ಕೆಲಸಕ್ಕೆ ಅಡ್ಡಿ ಬಾರದಂತೆ ಇನ್ನೊಂದು ಕೆಲಸ ಮಾಡಬಹುದು ಎಂಉ ತನ್ನ ಉದ್ಯೋಗಿಗಳಿಗೆ ಷರತ್ತು ನೀಡಿವೆ. ಆದರೆ ಕೆಲ ಕಂಪನಿಗಳು ಇದನ್ನು ಸಂಪೂರ್ಣವಾಗಿ ನಿಷೇಧಿಸಿವೆ. ಉದ್ಯೋಗಿಗಳು ಬಹು ಕೆಲಸಗಳನ್ನು ಮಾಡುವುದರಿಂದ ಅವರ ಉತ್ಪಾದಕತೆಯ ಮೇಲೆ ಪರಿಣಾಮ ಬೀರಬಹುದು ಎಂಬುದು ಅವುಗಳ ವಾದ.

ಐಟಿ ಉದ್ಯಮದಲ್ಲಿ ಮೂನ್‌ಲೈಟಿಂಗ್ ಇದೀಗ ಬಹು ಚರ್ಚೆಯ ವಿಷಯವಾಗಿದೆ, ಏಕೆಂದರೆ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಮನೆಯಿಂದಲೇ ಕೆಲಸ ಮಾಡುವುದು ಸಾಮಾನ್ಯ ರೂಢಿಯಾಗಿದೆ, ಇದು ಉಭಯ ಉದ್ಯೋಗದ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ನಂಬಲಾಗಿದೆ.

ಮೂನ್‌ಲೈಟಿಂಗ್ ಕುರಿತಾಗಿ ವಿಪ್ರೋ ಮುಖ್ಯಸ್ಥರ ಹೇಳಿಕೆಗಳು ಭಾರತೀಯ ಐಟಿ ಸಂಸ್ಥೆಯನ್ನು ಸ್ವಲ್ಪಮಟ್ಟಿಗೆ ವಿಭಜಿಸಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಎಫ್‌ಒ) ಎನ್‌ಜಿ ಸುಬ್ರಮಣ್ಯಂ ಅವರು ಇದನ್ನು ನೈತಿಕ ಸಮಸ್ಯೆ ಎಂದು ಹೇಳಿದ್ದಾರೆ, ಆದರೆ ಟೆಕ್ ಮಹೀಂದ್ರಾ ಸಿಇಒ ಸಿಪಿ ಗುರ್ನಾನಿ ಅವರು ಉದ್ಯೋಗಿಗಳಿಗೆ ಹೆಚ್ಚುವರಿ ಹಣವನ್ನು ಗಳಿಸಲು ಸಹಾಯ ಮಾಡಿದರೆ ಅಭ್ಯಾಸವನ್ನು ಮುಕ್ತವಾಗಿಸಬಹುದು ಎಂದು ಹೇಳಿದ್ದಾರೆ ಅಲ್ಲದೇ ಈ ಕುರಿತು ಉದ್ಯೋಗಿಗಳು ಮುಕ್ತರಾಗಿರಬೇಕು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!