ಜೈಲಿನಲ್ಲಿ ಹಾಯಾಗಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ಸಚಿವ ಸತ್ಯೇಂದರ್ ಜೈನ್: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ತಿಹಾರ್ ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ ನಾಯಕ ಮತ್ತು ಸಚಿವ ಸತ್ಯೇಂದರ್ ಜೈನ್ ಅವರ ಮಸಾಜ್‌ ವಿಡಿಯೋ ವೈರಲ್ ಆಗುತ್ತಿದೆ.

ನಿಯಮಗಳನ್ನು ಉಲ್ಲಂಘಿಸಿ ಸತ್ಯೇಂದರ್ ಜೈನ್ ಅವರಿಗೆ ವಿವಿಐಪಿ ಸೌಲಭ್ಯಗಳನ್ನು ಒದಗಿಸಿದ್ದಕ್ಕಾಗಿ ತಿಹಾರ್ ಜೈಲು ಅಧೀಕ್ಷಕ ಅಜಿತ್ ಕುಮಾರ್ ಅವರನ್ನು ಅಧಿಕಾರಿಗಳು ಇತ್ತೀಚೆಗೆ ಅಮಾನತುಗೊಳಿಸಿದ್ದರು. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ನೇಮಿಸಿದ ವಿಚಾರಣಾ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.

ಈ ಹಿನ್ನೆಲೆಯಲ್ಲಿ ಸತ್ಯೇಂದರ್ ಜೈನ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ವೈರಲ್‌ ಆಗುತ್ತಿರುವ ಸಾಕ್ಷಿಯಂತಿದೆ. ಈ ವೀಡಿಯೊದಲ್ಲಿ ಸತ್ಯೇಂದರ್ ಜೈನ್ ತನ್ನ ಸೆಲ್‌ ವ್ಯಕ್ತಿಯಿಂದ ತನ್ನ ಕಾಲುಗಳು, ಬೆನ್ನು ಮತ್ತು ತಲೆಯನ್ನು ಮಸಾಜ್ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!