ಮೊದಲ ಬಾರಿಗೆ ಮಗಳನ್ನು ಜಗತ್ತಿಗೆ ತೋರಿಸಿದ್ರು ಸರ್ವಾಧಿಕಾರಿ ಕಿಮ್ ಜಾಂಗ್ ಉನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇದೇ ಮೊದಲ ಬಾರಿಗೆ ಮಾಧ್ಯಮದ ಮುಂದೆ ತಮ್ಮ ಮಗಳನ್ನು ಕರೆದುಕೊಂಡು ಬಂದಿದ್ದಾರೆ.

ಕಿಮ್ ಜಾಂಗ್ ಉನ್ ಅವರ ಮಗಳು ಎಲ್ಲಿದ್ದಾಳೆ, ಏನು ಮಾಡುತ್ತಿದ್ದಾಳೆ, ಆಕೆ ಬದುಕಿದ್ದಾಳೆ ಎಂಬೆಲ್ಲಾ ಪ್ರಶ್ನೆಗಳು ಈ ಹಿಂದೆ ಉದ್ಭವಿಸಿತ್ತು. ಅದಕ್ಕೆ ಉತ್ತರವಾಗಿ ಕಿಮ್ ಜಾಂಗ್ ಉನ್ ಮಗಳನ್ನು ಮೊದಲ ಬಾರಿಗೆ ಮಾಧ್ಯಮದ ಎದುರು ಕರೆತಂದಿದ್ದಾರೆ.

ಹೊಸ ಬಗೆಯ ಅಂತರಖಂಡ ಬ್ಯಾಲಿಸ್ಟಿಕ್ ಕ್ಷಿಪಣಿ ಲಾಂಚ್ ವೇಳೆ ಮಗಳ ಜೊತೆ ಕಾಣಿಸಿದ್ದಾರೆ. ಮಗಳ ಕೈ ಹಿಡಿದು ಕರೆದುಕೊಂಡು ಬರುತ್ತಿರುವ ಕಿಮ್ ಅವರ ಫೋಟೊಗಳು ಎಲ್ಲೆಡೆ ವೈರಲ್ ಆಗಿದೆ.

ಕಿಮ್ ಜಾಂಗ್ ಉನ್‌ಗೆ ಮೂವರು ಮಕ್ಕಳಿದ್ದಾರೆ. ಇಬ್ಬರು ಹೆಣ್ಣುಮಕ್ಕಳು ಹಾಗೂ ಮಗ. ಇದೇ ಮೊದಲ ಬಾರಿಗೆ ಕಿಮ್ ಮಗಳನ್ನು ಸಾರ್ವಜನಿಕವಾಗಿ ಕರೆತಂದು ಎಲ್ಲರಿಗೂ ಪರಿಚಯ ಮಾಡಿಸಿಕೊಟ್ಟುದ್ದಾರೆ.

ಕಳೆದ ತಿಂಗಳಿನಿಂದ ಕಿಮ್ ಯಾವುದೇ ಮಾಧ್ಯಮದ ಮುಂದೆ ಕಾಣಿಸಿರಲಿಲ್ಲ. ಇದೀಗ ಕೊರಿಯಾದ ಪ್ರಮುಖ ಮಾಧ್ಯಮಗಳ ಮುಂದೆ ತಮ್ಮ ಮಗಳ ಜೊತೆ ಕಾಣಿಸಿದ್ದಾರೆ. ಅಮೆರಿಕ ಹಾಗೂ ಇತರೆ ಕೆಲ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಲು ಪ್ಯಾಂಗಾಂಗ್ ಪ್ರದೇಶದಿಂದ ಹ್ವಾಸಾಂಗ್-17 ಕ್ಷಿಪಣಿಯನ್ನು ಉಡಾವಣೆ ಮಾಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!