ಟಿಕೆಟ್ ವಿಚಾರಕ್ಕೆ ಮಹಿಳೆಗೆ ಹಲ್ಲೆ: ಬಿಎಂಟಿಸಿ ಕಂಡಕ್ಟರ್ ಅಮಾನತು ಬೆನ್ನಲ್ಲೇ ಬಂಧನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿಕೆಟ್ ವಿಚಾರಕ್ಕೆ ಬಿಎಂಟಿಸಿ ಕಂಡಕ್ಟರ್ ಮಹಿಳೆ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ನಗರದ ಸಿದ್ದಾಪುರ ಠಾಣಾ ವ್ಯಾಪ್ತಿಯ ಡೈರಿ ಸರ್ಕಲ್ ಬಳಿ ನಡೆದಿದೆ. ತನ್ಜುಲಾ (24) ಹಲ್ಲೆಗೊಳಗಾದ ಯುವತಿ. ಹೊನ್ನಪ್ಪ ಹಲ್ಲೆ ಮಾಡಿರುವ ಆರೋಪಿಯಾಗಿದ್ದು, ಇದೀಗ ಸಿದ್ದಾಪುರ ಠಾಣೆ ಪೊಲೀಸರುಕಂಡಕ್ಟರ್ ಅನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್ 354, 323, 506 ಹಾಗೂ 509 ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಬೆಂಗಳೂರಿನ ಎಸ್‌ಎಸ್‌ಎನ್ ಲೇಡೀಸ್ ಪಿಜಿಯಲ್ಲಿ ವಾಸವಿದ್ದ ಯುವತಿ ತನ್ಜುಲಾ ಕಮರ್ಷಿಯಲ್ ಸ್ಟ್ರೀಟ್‌ನ ಲ್ಯಾಂಡ್‌ ಮಾರ್ಕ್ ಗ್ರೂಪ್ ಮ್ಯಾಕ್ಸ್ ಫ್ಯಾಶನ್‌ ಎಂಬಲ್ಲಿ ಕೆಲಸ ಮಾಡುತ್ತಿದ್ದು,ಬೆಳಗ್ಗೆ ಬಿಳೇಕಳ್ಳಿಯಿಂದ ಶಿವಾಜಿನಗರಕ್ಕೆ ಕೊತ್ತನೂರು ದಿಣ್ಣೆಯ 34 ನೇ ಡಿಪೋಗೆ ಸೇರಿದ ಬಸ್ ನಂ 368 ರಲ್ಲಿ ಪ್ರಯಾಣದ ವೇಳೆ ಕಂಡಕ್ಟರ್ ಮತ್ತು ಯುವತಿ ನಡುವೆ ಉಚಿತ ಪ್ರಯಾಣದ ವಿಚಾರವಾಗಿ ವಾಗ್ವಾದವೇ ಜಗಳಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಟಿಕೆಟ್ ನೀಡಲು ಆಧಾರ್ ಕಾರ್ಡ್ ತೋರಿಸುವಂತೆ ಕಂಡಕ್ಟರ್ ಕೇಳಿದ್ದಾರೆ. ಆದರೆ ಎರಡು ಬಸ್ ಸ್ಟಾಪ್ ಬಂದ್ರೂ ಆಧಾರ್ ತೋರಿಸಿರಲಿಲ್ಲ. ಸ್ಟೇಜ್ ಮುಕ್ತಾಯ ಆಗುತ್ತೆ ಬೇಗ ಆಧಾರ್ ಕಾರ್ಡ್ ತೋರಿಸಿ, ಆಧಾರ್ ಕಾರ್ಡ್ ಇಲ್ಲದಿದ್ರೆ ಹಣ ಕೊಟ್ಟು ಟಿಕೆಟ್ ಖರೀದಿಸುವಂತೆ ಕಂಡಕ್ಟರ್ ಹೇಳಿದ್ದಾನೆ. ಇದೇ ವಿಚಾರಕ್ಕೆ ಕಂಡಕ್ಟರ್ ಜೊತೆಗೆ ವಾಗ್ವಾದ ಮಾಡಿರುವ ಯುವತಿ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಯುವತಿ ಕಂಡಕ್ಟರಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಇದರಿಂದ ರೊಚ್ಚಿಗೆದ್ದು ಕಂಡಕ್ಟರ್ ಯುವತಿಯ ಮೇಲೆ ಹಲ್ಲೆ ಮಾಡಿದ್ದಾನೆ.

ಮಹಿಳೆಯ ಮೇಲೆ ಕಂಡಕ್ಟರ್ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಬಸ್‌ನಲ್ಲಿನ ಓರ್ವ ಪ್ರಯಾಣಿಕ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಕಂಡಕ್ಟರ್ ಗೂಂಡಾ ವರ್ತನೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುವತಿ ಮೇಲೆ ಹಲ್ಲೆ ಮಾಡಿರುವ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕಂಡಕ್ಟರ್ ಹೊನ್ನಪ್ಪ ನಾಗಪ್ಪ ಅಗಸರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!