October 1, 2026
Thursday, October 1, 2026
spot_img

ಹಾಯಾಗಿ ಸ್ನಾನ ಮಾಡ್ತಿದ್ದ ಯುವತಿಯ ವಿಡಿಯೋ ಮಾಡಿಕೊಂಡ ಅಪರಿಚಿತ, ದೂರು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯುವಕನೊಬ್ಬ ಬಾಡಿಗೆ ಮನೆಯಲ್ಲಿ ಸ್ನಾನ ಮಾಡ್ತಿದ್ದ ಯುವತಿಯ ವಿಡಿಯೋ ಚಿತ್ರೀಕರಿಸಿದ ಘಟನೆ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗರುಡಾಚಾರ್‌ ಪಾಳ್ಯದಲ್ಲಿ ವಾಸವಾಗಿದ್ದ 23 ವರ್ಷ ಸಾಫ್ಟ್‌ವೇರ್‌ ಇಂಜಿನಿಯರ್‌ ಎಂದಿನಂತೆ ಸ್ನಾನಕ್ಕೆ ಹೋಗಿದ್ದಾರೆ. ಏನೋ ಸದ್ದಾಗಿದೆ ಎನ್ನಿಸಿದಾಗ ಹಿಂದಕ್ಕೆ ತಿರುಗಿದ್ದಾರೆ. ಆಗ ವ್ಯಕ್ತಿಯೊಬ್ಬ ಅವರ ವಿಡಿಯೋ ಮಾಡಿದ್ದು ಕಾಣಿಸಿದೆ. ತಕ್ಷಣ ಆಕೆ ಕಿರುಚಿದ್ದಾರೆ, ವ್ಯಕ್ತಿ ಓಡಿಹೋಗಿದ್ದಾರೆ.

ತಕ್ಷಣವೇ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ. ಈ ಘಟನೆಯಿಂದ ಮಾನಸಿಕವಾಗಿ ಯುವತಿ ಕುಗ್ಗಿಹೋಗಿದ್ದಾರೆ. ತನ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್‌ ಮಾಡುವ ಭೀತಿ ಅವರನ್ನು ಕಾಡುತ್ತಿದೆ.

Must Read