ಕರಾಚಿ ಯೂನಿವರ್ಸಿಟಿ ಬಳಿಯ ಸ್ಫೋಟಕ್ಕೆ ಮಹಿಳೆ ಕಾರಣ?: ಸಿಸಿಟಿವಿ ದಾಖಲಿಸಿಕೊಂಡ ದೃಶ್ಯವೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಾಕಿಸ್ತಾನದ ಆರ್ಥಿಕ ರಾಜಧಾನಿ ಕರಾಚಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಸ್ಫೋಟ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದು, ಮಹಿಳಾ ಆತ್ಮಾಹುತಿ ಬಾಂಬರ್‌ನಿಂದ ಸ್ಫೋಟ ಉಂಟಾಗಿದ್ದು, ವ್ಯಾನ್ ಹೊತ್ತಿ ಉರಿದ ಕ್ಷಣವನ್ನು ತೋರಿಸುತ್ತದೆ.
ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್ ಆಘಾತಕಾರಿ ಸಿಸಿಟಿವಿ ದೃಶ್ಯಾವಳಿಗಳನ್ನು ಪ್ರಸಾರ ಮಾಡಿದ್ದು, ಇಲ್ಲಿ ಬಂದರು ನಗರದಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಚೈನೀಸ್ ಭಾಷೆಯನ್ನು ಕಲಿಸುವ ಲಾಭರಹಿತ ಸಂಸ್ಥೆ – ಚೀನಾ ನಿರ್ಮಿಸಿದ ಕನ್ಫ್ಯೂಷಿಯಸ್ ಸಂಸ್ಥೆಯ ಗೇಟ್ ಬಳಿ ವ್ಯಾನ್‌ನಲ್ಲಿ ಸ್ಫೋಟ ಸಂಭವಿಸಿದೆ. ಇನ್ನು ಬಲೂಚ್ ಲಿಬರೇಶನ್ ಆರ್ಮಿ ಹೊಣೆಗಾರಿಕೆಯನ್ನು ವಹಿಸಿಕೊಂಡಿದೆ.
ಮೃತಪಟ್ಟ ನಾಲ್ವರಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಚೀನಾ ಪ್ರಜೆಗಳು ಸೇರಿದ್ದಾರೆ. ಬಲೂಚ್ ಲಿಬರೇಶನ್ ಆರ್ಮಿಯ ಮಜೀದ್ ಬ್ರಿಗೇಡ್ ಆತ್ಮಹತ್ಯಾ ದಾಳಿಯ ಹೊಣೆಯನ್ನು ಒಪ್ಪಿಕೊಂಡಿದೆ.

ಮಹಿಳಾ ದಾಳಿಕೋರರ ಚಿತ್ರವನ್ನು ಸಹ BLA ಹಂಚಿಕೊಂಡಿದೆ. ಶಾರಿ ಬಲೋಚ್ ಎಂಬ ಮಹಿಳಾ ಆತ್ಮಹತ್ಯಾ ಬಾಂಬರ್‌ನಿಂದ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ ಎಂದು ಗುಂಪಿನ ವಕ್ತಾರರು ಹೇಳುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!