ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಗೆಳೆಯನನ್ನು ಮತ್ತೊಂದು ಹುಡುಗಿಯ ಜೊತೆಗೆ ನೋಡಿದ ಯುವತಿ ಕೆರಳಿ ಕೆಂಡಾಮಂಡಲವಾಗಿ ಹೊಡೆದಾಡಿರುವ ಘಟನೆ ಬಿಹಾರದ ಸೋನೆಪುರದಲ್ಲಿ ನಡೆದಿದೆ. ತನ್ನ ಸ್ನೇಹಿತರೊಂದಿಗೆ ಜಾತ್ರೆಗೆ ಬಂದಿದ್ದ ಯುವತಿಯೊಬ್ಬಳು ಅದೇ ಜಾತ್ರೆಯಲ್ಲಿ ತನ್ನ ಗೆಳೆಯನನ್ನು ಮತ್ತೊಬ್ಬ ಹುಡುಗಿ ಜೊತೆ ನೋಡಿದ್ದಾಳೆ ಅಷ್ಟೇ ಕತೆ ಮಗೀತು…ನಿನಗೆ ನನ್ನ ಹುಡುಗ ಬೇಕೆನೇ ಎಂದು ನೋಡ ನೋಡುತ್ತಿರುವಾಗಲೇ ಇಬ್ಬರ ನಡುವೆ ಜಗಳ ಶುರುವಾಯಿತು. ಅವಳ ಕೂದಲು ಹಿಡಿದು ಎಳೆದಾಡಿ ಕಾಲಿನಿಂದ ಒದ್ದರು.
ಈಕೆಗೆ ಅವಳ ಸ್ನೇಹಿತರು ಕೂಡಾ ಸಾಥ್ ನೀಡಿದ್ದು, ನಾಲ್ವರು ಹುಡುಗಿಯರು ಸೇರಿ ಯುವತಿಗೆ ಮನಸೋ ಇಚ್ಛೆ ಥಳಿಸಿದ್ದಾರೆ. ದಾಳಿಯಲ್ಲಿ ಸಂತ್ರಸ್ತೆಯ ಬಟ್ಟೆ ಹರಿದು ರಸ್ತೆಯಲ್ಲೆಲ್ಲಾ ಗೊಂದಲ ವಾತಾವರಣ ಸೃಷ್ಟಿ ಮಾಡಿದರು. ಹೆಣ್ಮಕ್ಕಳ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
बिहार : एक बॉयफ्रेंड के लिए भिड़ गईं 5 लड़कियां
◆ एक को सोनपुर मेला घुमाने लाया था, बाकियों ने देखा तो टूट पड़ी
◆ हाथापाई ऐसी हुई कि कपड़े तक फट गए@SauravKu_News24 pic.twitter.com/fF1Lbl5zlf
— News24 (@news24tvchannel) November 29, 2022