ಹೊಸದಿಗಂತ ವರದಿ,ವಿಜಯಪುರ:
ಕೃಷ್ಣಾ ನದಿ ಸೇತುವೆ ಮೇಲಿಂದ ನದಿಗೆ ಹಾರಿ ಓರ್ವ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕೊಲ್ಹಾರ ಬಳಿಯ ಕೃಷ್ಣಾ ನದಿ ಸೇತುವೆ ಬಳಿ ಸೋಮವಾರ ನಡೆದಿದೆ.
ಕೊಲ್ಹಾರ ತಾಲೂಕಿನ ಮಟ್ಟಿಹಾಳ ಗ್ರಾಮದ ಶಾಂತವ್ವ ಬಸಪ್ಪ ಜಂಬಗಿ (35)
ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಶಾಂತವ್ವ ಜಂಬಗಿ, ದೈಹಿಕ ಅನಾರೋಗ್ಯದಿಂದ ಬಳಲುತ್ತಿರುವುದಕ್ಕೆ ಮನನೊಂದು, ಸೇತುವೆ ಮೇಲಿಂದ ಕೃಷ್ಣ ನದಿಗೆ ಹಾರಿದ್ದಾಳೆ. ದೂರದಲ್ಲಿರುವ ಮೀನುಗಾರರು ನೋಡಿ ಸ್ಥಳಕ್ಕೆ ಧಾವಿಸಿ ಹೊರ ತರುವಷ್ಟರಲ್ಲಿ ಮಹಿಳೆಯ ಪ್ರಾಣ ಹೋಗಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಈ ಸಂಬಂಧ ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.