ಹೊಸದಿಗಂತ ಡಿಜಿಟಲ್ ಡೆಸ್ಕ್:
ಭರತನಾಟ್ಯ ನರ್ತಕರು ಕಲಶದ ಮೇಲೆ ಅಥವಾ ತಟ್ಟೆಯ ಮೇಲೆ ನೃತ್ಯ ಮಾಡೋದನ್ನು ನೋಡಿರುತ್ತೇವೆ. ಅದನ್ನು ಮಾಡಲು ಅಭ್ಯಾಸ ಬೇಕು, ಇಲ್ಲವಾದರೆ ಬ್ಯಾಲೆನ್ಸ್ ತಪ್ಪುತ್ತದೆ. ಆದರೆ ವೈರಲ್ ವಿಡಿಯೋದಲ್ಲಿ ಮಹಿಳೆ ಮಾಡಿದ ಬ್ಯಾಲೆನ್ಸ್ ಡ್ಯಾನ್ಸ್ ನೋಡಿದರೆ ವಾವ್ ಅನ್ನಿಸುತ್ತದೆ.
ಅಡುಗೆ ಅನಿಲ ಸಿಲಿಂಡರ್ ಅನ್ನು ನೆತ್ತಿಯ ಮೇಲಿಟ್ಟುಕೊಂಡು ಕೆಳಗೆ ಬಿಂದಿಗೆಯ ಮೇಲೆ ನಿಂತು ನೃತ್ಯ ಮಾಡಿದ್ದಾಳೆ. ಈ ಮಹಿಳೆಯ ಬ್ಯಾಲೆನ್ಸ್ ಡ್ಯಾನ್ಸ್ ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.
ಈ ವೀಡಿಯೋ ನೋಡಿದವರು ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ವಿಡಿಯೋಗೆ 1 ಲಕ್ಷ 83 ಸಾವಿರ ಲೈಕ್ಸ್ ಸಿಕ್ಕಿದೆ. ಮತ್ತು ಈ ಬ್ಯಾಲೆನ್ಸ್ ಡ್ಯಾನ್ಸ್ ಅನ್ನು ನೀವೂ ನೋಡಿ..