October 10, 2026
Saturday, October 10, 2026
spot_img

ಸಂತಾನಹರಣ ಚಿಕಿತ್ಸೆ ವೇಳೆ ಕರುಳನ್ನೇ ಕತ್ತರಿಸಿದ ಡಾಕ್ಟರ್‌? ಮಹಿಳೆ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಂತಾನಹರಣ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾದ ಮಹಿಳೆಯೊಬ್ಬರು ಹೆಣವಾಗಿ ಮನೆಗೆ ಬಂದ ಘಟನೆ ಚಿಕ್ಕಬಳ್ಳಾಪುರದ, ಚಿಂತಾಮಣಿಯ ಬಟ್ಲಹಳ್ಳಿಯಲ್ಲಿ ನಡೆದಿದೆ.

ಚಿಂತಾಮಣಿ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನರ್ಮದಾ ಮೃತರು. ಆಸ್ಪತ್ರೆಯಲ್ಲಿ ಟ್ಯುಬೆಕ್ಟಮಿ ಚಿಕಿತ್ಸೆ ಪಡೆದ ನರ್ಮದಾ ಅಲ್ಲಿಯೇ 14 ಕಳೆದಿದ್ದರು. ಇದಾದ ನಂತರ ಎಲ್ಲವೂ ನಾರ್ಮಲ್‌ ಎಂದು ಹೇಳಿ ಮನೆಗೆ ಕಳುಹಿಸಲಾಗಿತ್ತು.

ಆದರೆ ಮನೆಗೆ ಬಂದ ಎರಡನೇ ದಿನಕ್ಕೆ ನರ್ಮದಾಗೆ ಹೇಳಲಾರದಷ್ಟು ಬೆನ್ನುನೋವು ಕಾಣಿಸಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್‌ನಲ್ಲಿ ಕರೆತರುತ್ತಿದ್ದ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಇದಕ್ಕೆಲ್ಲಾ ಆಪರೇಷನ್‌ ಮಾಡಿದ ವೈದ್ಯೆಯೇ ಕಾರಣ, ಕರುಳನ್ನು ಕತ್ತರಿಸಿದ್ದಾರೆ ಎಂದು ಪತಿ ಆರೋಪಿಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಯ ಎದುರು ಇಟ್ಟು ಕುಟುಂಬದವರು ಆಕ್ರೋಶ ಹೊರಹಾಕಿದ್ದಾರೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Must Read