ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನ ದಿನಗಳಲ್ಲಿ `ಲಿವ್ ಇನ್ ರಿಲೇಷನ್’ ಎನ್ನುವುದು ಸಾಮಾನ್ಯ . ಆದ್ರೆ ಇಂತಹ ಸಂಬಂಧದಿಂದಾಗಿ ಈಗಾಗಲೇ ಹಲವಾರು ಮಂದಿ ಸಮಸ್ಯೆಗೆ ಸಿಲುಕಿರುವುದು.ಮಹಿಳೆಯರೇ ತಮಗೆ ಮೋಸವಾಗಿದೆ ಎಂದು ದೂರು ಕೂಡ ನೀಡಿದ್ದಾರೆ.
ಇದೀಗ ಮಧ್ಯಪ್ರದೇಶದ ಹೈಕೋರ್ಟ್ ಈ ಕುರಿತು ಮಹತ್ವದ ತೀರ್ಪನ್ನು ನೀಡಿದ್ದು, ಮದುವೆಯಾಗದೆ ಜೊತೆಯಲ್ಲಿದ್ದ ಮಹಿಳೆಗೂ ಜೀವನಾಂಶ ಕೊಡಬೇಕು. ವಿಚ್ಛೇದನದಂತೆ ಈ ಸಂಬಂಧದಲ್ಲೂ ಗಂಡು ಹೆಣ್ಣಿಗೆ ಜೀವನಾಂಶ ಕೊಡಬೇಕು ಎಂದು ಹೇಳಿದೆ.
ಪುರುಷನೊಂದಿಗೆ ಹಲವು ವರ್ಷಗಳಿಂದ ವಾಸಿಸುವ ಮಹಿಳೆ ಕಾನೂನುಬದ್ಧವಾಗಿ ಮದುವೆಯಾಗದಿದ್ದರೂ ಸಹ ಪ್ರತ್ಯೇಕತೆಯ ನಂತರ ಜೀವನಾಂಶಕ್ಕೆ ಅರ್ಹಳು ಎಂದು ತೀರ್ಪು ನೀಡಿದೆ.
ತಾನು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಮಹಿಳೆಗೆ ಮಾಸಿಕವಾಗಿ 1,500 ರೂ. ಭತ್ಯೆ ನೀಡಬೇಕು ಎಂಬ ವಿಚಾರಣಾ ನ್ಯಾಯಾಲಯ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿದ ಅರ್ಜಿದಾರರಿಗೆ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಆದರೆ ಹೈಕೋರ್ಟ್ ವಿಚಾರಣಾ ನ್ಯಾಯಾಲಯ ಆದೇಶವನ್ನು ಎತ್ತಿ ಹಿಡಿದಿದೆ.
ಪುರುಷ ಮತ್ತು ಮಹಿಳೆ ಪತಿ-ಪತ್ನಿಯಾಗಿ ಜೀವಿಸುತ್ತಿದ್ದರು ಎಂಬ ವಿಚಾರಣಾ ನ್ಯಾಯಾಲಯದ ತೀರ್ಮಾನವನ್ನು ಹೈಕೋರ್ಟ್ ಉಲ್ಲೇಖಿಸಿದೆ. ದಂಪತಿಗಳ ನಡುವೆ ಸಹಬಾಳ್ವೆಯ ಪುರಾವೆಗಳಿದ್ದರೆ ಜೀವನಾಂಶವನ್ನು ನಿರಾಕರಿಸಲಾಗುವುದಿಲ್ಲ ಎಂದು ನ್ಯಾಯಾಧೀಶರು ಒತ್ತಿ ಹೇಳಿದರು. ಪುರುಷ ಮತ್ತು ಮಹಿಳೆ ಪತಿ-ಪತ್ನಿಯಾಗಿ ಜೀವಿಸುತ್ತಿದ್ದರು ಎಂಬ ವಿಚಾರಣಾ ನ್ಯಾಯಾಲಯದ ತೀರ್ಮಾನವನ್ನು ಹೈಕೋರ್ಟ್ ಉಲ್ಲೇಖಿಸಿದೆ. ಹೆಚ್ಚುವರಿಯಾಗಿ, ಸಂಬಂಧದೊಳಗೆ ಮಗುವಿನ ಜನನವನ್ನು ಪರಿಗಣಿಸಿ, ನ್ಯಾಯಾಲಯವು ಮಹಿಳೆಯ ನಿರ್ವಹಣೆಗೆ ಹಣ ನೀಡಬೇಕು ಎಂದು ಹೇಳಿದೆ.