ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಮಹಿಳೆ, ಇಬ್ಬರು ಮಕ್ಕಳು ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದೆಹಲಿಯ ಹೋಲಂಬಿ ಕಲಾನ್ ರೈಲು ನಿಲ್ದಾಣದಲ್ಲಿ ಮಹಿಳೆಯೊಬ್ಬರು ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ಚಲಿಸುವ ರೈಲಿನ ಅಡಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಂಗಳವಾರ ಮಧ್ಯಾಹ್ನ 2.13ರ ಸುಮಾರಿಗೆ ಈ ಘಟನೆ ನಡೆದಿದೆ. 30 ವರ್ಷದ ಮಹಿಳೆ 5 ವರ್ಷದ ಹಾಗೂ 10 ತಿಂಗಳ ಮಗುವಿನೊಂದಿಗೆ ರೈಲಿನಿಂದ ಹಾಕಿ ಆತ್ಮಹತ್ಯೆಗೆ೪ ಶರಣಾಗಿದ್ದಾರೆ.
“ ಮಹಿಳೆ ಆತ್ಮಹತ್ಯೆಯ ಬಗ್ಗೆ ನಮಗೆ ರೈಲ್ವೆ ರಕ್ಷಣಾ ಪಡೆ ನಿಯಂತ್ರಣ ಕೊಠಡಿಯಿಂದ ಮಾಹಿತಿ ಬಂದಿತ್ತು. ತಕ್ಷಣವೇ ತನಿಖಾಧಿಕಾರಿಯನ್ನು ಸ್ಥಳಕ್ಕೆ ಕಳುಹಿಸಲಾಯಿತು. ಹಳಿಯ ಮೇಲೆ ಮಹಿಳೆ ಮತ್ತು ಇಬ್ಬರು ಮಕ್ಕಳ ಮೇತದೇಹ ಪತ್ತೆಯಾಗಿದೆ. ಮೂವರು ಅಮೃತಸರ ಇಂಟರ್‌ಸಿಟಿ ರೈಲಿನ ಮುಂದೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರೈಲ್ವೇ ಪೊಲೀಸ್ ಉಪ ಕಮಿಷನರ್ ಹರೇಂದ್ರ ಕೆ ಸಿಂಗ್ ಹೇಳಿದ್ದಾರೆ.
ದೇಹಗಳನ್ನು ಸಬ್ಜಿ ಮಂಡಿ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ಮಹಿಳೆ ಆತ್ಮಹತ್ಯೆಯ ಉದ್ದೇಶದಿಂದ ತನ್ನ ಮಕ್ಕಳೊಂದಿಗೆ ಟ್ರ್ಯಾಕ್ ಮೇಲೆ ಹಾರಿದ್ದನನ್ನು ಗಮನಿಸಿದೆ. ಆ ವೇಳೆ 100 ಕಿ.ಮೀ ಗಿಂತಲೂ ಅಧಿಕವೇಗದಲ್ಲಿ ರೈಲು ಓಡುತ್ತಿದ್ದರಿಂದ ರೈಲು ನಿಲ್ಲಿಸಲು ಸಾಧ್ಯವಾಗಲಿಲ್ಲ ಎಂದು ರೈಲ್ವೆ ಚಾಲಕ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!