ಸಿಖ್‌ ಸಮುದಾಯ ಕುರಿತು ಹೇಳಿಕೆ, ಕ್ಷಮೆಯಾಚಿಸಿದ ಕಿರಣ್‌ ಬೇಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ನಾಯಕಿ ಕಿರಣ್ ಬೇಡಿ ಸಿಖ್‌ ಸಮುದಾಯದ ಬಗೆಗೆ ಅವಹೇಳನಕಾರಿ ಮಾತುಗಳ ಕುರಿತು ಖುದ್ದು ಕ್ಷಮೆಯಾಚಿಸಿದ್ದಾರೆ. ತಮ್ಮ ‘ಫಿಯರ್‌ಲೆಸ್‌ ಗವರ್ನೆನ್ಸ್‌’ ಎಂಬ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಸರ್ದಾರ್‌ ಜೀ ಬಗ್ಗೆ ನೀಡಿರುವ ಹೇಳಿಕೆಗಳಿಗೆ  ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅತ್ಯಂತ ಧೈರ್ಯ, ನಿಷ್ಠಾವಂತ, ದೇಶಪ್ರೇಮ ಹೊಂದಿರುವ ಸಿಖ್ಖರ ಬಗ್ಗೆ ಹೀಗೆ ಮಾತನಾಡುವುದು ಸರಿಯಲ್ಲ ಎಂದು ಸಿಖ್‌ ಸಮುದಾಯ ಸೇರಿದಂತೆ ಕೆಲ ರಾಜಕೀಯ ನಾಯಕರು ಕಿರಣ್‌ ಬೇಡಿ ವಿರುದ್ಧ ಕಿಡಿಕಾರಿದ್ದರು.

ಕೂಡಲೇ ಈ ಬಗ್ಗೆ ಪ್ರತಿಕ್ರಿಸಿರುವ ಕಿರಣ್‌ ಬೇಡಿ ತಮ್ಮ ಟ್ವಿಟ್ಟರ್‌ ಖಾತೆ ಮೂಲಕ ಕ್ಷಮೆಯಾಚಿಸಿದ್ದಾರೆ. “ನನ್ನ ಸಮುದಾಯದ ಬಗ್ಗೆ ನನಗೆ ಅತ್ಯಂತ ಗೌರವವಿದೆ. ಬಾಬಾ ನಾನಕ್ ದೇವ್ ಜಿ ಅವರ ಪರಮ ಭಕ್ತೆ ನಾನು. ನನ್ನ ಮಾತುಗಳನ್ನು ಅಪಾರ್ಥ ಮಾಡಿಕೊಳ್ಳಬೇಡಿ. ಯಾರ ಮನಸನ್ನೂ ನೋಯಿಸಲು ನಾನು ಈ ಮಾತುಗಳನ್ನು ಆಡಿಲ್ಲ. ಇದಕ್ಕಾಗಿ ನಾನು ಎಲ್ಲರಲ್ಲೂ ಕ್ಷಮೆ ಯಾಚಿಸುತ್ತೇನೆ” ಎಂದು ಟ್ವೀಟ್‌ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!