ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ-ಗುವಾಹಟಿ ಇಂಡಿಗೋ ವಿಮಾನ(IndiGO Flight)ದಲ್ಲಿ ಮಹಿಳೆಗೆ ಪ್ರಯಾಣಿಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ವ್ಯಕ್ತಿ ಸೀಟಿನ ಆರ್ಮ್ರೆಸ್ಟ್ ಅನ್ನು ಮೇಲಕ್ಕೆತ್ತಿ ಮಹಿಳಾ ಪ್ರಯಾಣಿಕರೊಬ್ಬರಿಗೆ ಕಿರುಕುಳ ನೀಡುತ್ತಿದ್ದನು.
ಇದೀಗ ಎಫ್‌ಐಆರ್ ದಾಖಲಾಗಿದ್ದು, ವ್ಯಕ್ತಿಯನ್ನು ಗುವಾಹಟಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಇಂಡಿಗೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ವಿಮಾನ, 6E-5319 ಮುಂಬೈನಿಂದ ರಾತ್ರಿ 9 ಗಂಟೆಗೆ ಹೊರಟು 12.15 ಕ್ಕೆ ಗುವಾಹಟಿ ತಲುಪಿತು. ಮಹಿಳೆ ಮಲಗುವಾಗ ಆರ್ಮ್ರೆಸ್ಟ್ ಕೆಳಕ್ಕೆ ಇಳಿಸಿ ಮಲಗಿದ್ದಳು, ಆಕೆಗೆ ಎಚ್ಚರವಾಗುವಷ್ಟರಲ್ಲಿ ಆರ್ಮ್ರೆಸ್ಟ್ ಮೇಲೆಕ್ಕೆತ್ತಿತ್ತು ಹಾಗೂ ಸಹ ಪ್ರಯಾಣಿಕ ಆಕೆಯ ಮೇಲೆ ಒರಗಿ ನಿದ್ರಿಸುತ್ತಿದ್ದ. ಆಗ ಮತ್ತೊಮ್ಮೆ ಅವರು ಹ್ಯಾಂಡ್ರೆಸ್ಟ್ ಕೆಳಗಿಳಿಸಿದ್ದಾರೆ.
ವ್ಯಕ್ತಿ ತನ್ನ ಸ್ಪರ್ಶಿಸಿದ್ದರಿಂದ ಆಕೆ ಎಚ್ಚರಗೊಂಡಿದ್ದಾಳೆ. ಉದ್ದೇಶಪೂರ್ವಕವಾಗಿ ಮುಟ್ಟುತ್ತಿದ್ದಾನೋ ಅಥವಾ ಅಜಾಗರೂಕತೆಯಿಂದ ಮಾಡುತ್ತಿದ್ದಾನೋ ಎಂದು ಖಚಿತಪಡಿಸಿಕೊಳ್ಳಲು ನಿದ್ರಿಸುವಂತೆ ನಟಿಸಿದ್ದರು, ಸ್ವಲ್ಪ ಸಮಯದ ಬಳಿಕ ಆತ ಪ್ರಜ್ಞಾಪೂರ್ವಕವಾಗಿಯೇ ಆಕೆಯನ್ನು ಮುಟ್ಟುತ್ತಿರುವುದು ಗೊತ್ತಾಗಿದೆ.
ಆಕೆಯನ್ನು ಸ್ಪರ್ಶಿಸಲು ಬಂದಾಗ ಆತನ ಕೈ ಹಿಡಿದುಕಿರುಚಿಕೊಂಡಳು, ಸೀಟ್ ಲೈಟ್ ಆನ್ ಮಾಡಿ ಸಿಬ್ಬಂದಿಯನ್ನು ಕರೆದಿದ್ದಾರೆ. ಆಕೆ ಘಟನೆಯನ್ನು ವಿವರಿಸುತ್ತಿರುವಾಗ ಕ್ಷಮೆಯಾಚಿಸಿಲು ಪ್ರಾರಂಭಿಸಿದ್ದ, ಮಹಿಳೆ ಅತನ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾರೆ. ಇಂಡಿಗೋ ಪೊಲೀಸರೊಂದಿಗೆ ಸಹಕರಿಸುವುದಾಗಿ ಮತ್ತು ತನಿಖೆಯಲ್ಲಿ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಹೇಳಿದೆ.