ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್‌ನ ಗುರುದ್ವಾರದ ಅವರಣದಲ್ಲಿ ಮದ್ಯಪಾನ ಮಾಡಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರ್ಮಿಂದರ್ ಕೌರ್ ಎಂದು ಗುರುತಿಸಲಾದ ಮಹಿಳೆ ದುಖ್ನಿವರನ್ ಸಾಹಿಬ್ ಗುರುದ್ವಾರ ‘ಸರೋವರ್’ (ಪವಿತ್ರ ನೀರಿನ ಟ್ಯಾಂಕ್) ಬಳಿ ಮದ್ಯ ಸೇವಿಸುತ್ತಿದ್ದಳು. ಇದನ್ನು ಗಮನಿಸಿದವರು ಆಕೆಯನ್ನು ಮ್ಯಾನೇಜರ್ ಕಚೇರಿಗೆ ಕರೆದೊಯ್ಯಲು ನಿರ್ಧರಿಸಿದರು, ಆದರೆ ಅಲ್ಲಿ ಹಾಜರಿದ್ದ ನಿರ್ಮಲ್ಜೀತ್ ಸಿಂಗ್ ಸೈನಿ ಕೋಪದಿಂದ ಗುಂಡು ಹಾರಿಸಿದರು ಎಂದು ಪಟಿಯಾಲಾ ಪೊಲೀಸ್ ಹಿರಿಯ ಅಧೀಕ್ಷಕ ವರುಣ್ ಶರ್ಮಾ ಹೇಳಿದ್ದಾರೆ.
ಸೈನಿ ತನ್ನ 32 ಬೋರ್ ಪರವಾನಗಿ ಪಡೆದ ರಿವಾವ್ಲರ್‌ನಿಂದ ಮಹಿಳೆಯ ಮೇಲೆ ಐದು ಸುತ್ತು ಗುಂಡು ಹಾರಿಸಿದ್ದಾನೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ವೈದ್ಯರು ಆಕೆ ಮೃತಪಟ್ಟಿರುವುದನ್ನು ಖಚಿತ ಪಡಿಸಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.