Sunday, March 26, 2023

Latest Posts

VIRAL VIDEO| ರೈಲಿನಲ್ಲಿ ಸಾಕು ನಾಯಿ ಜೊತೆ ಪ್ರಯಾಣ: ರೈಲ್ವೇ ಸಚಿವರು ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಕು ನಾಯಿಗಳ ಮಾಲೀಕರು ಅವುಗಳನ್ನು ಬಹಳ ಇಷ್ಟಪಟ್ಟು ಸಾಕುತ್ತಾರೆ. ಬೇರೆಡೆ ಪ್ರಯಾಣಿಸುವ ವೇಳೆ ಕೆಲವು ನಿಬಂಧನೆಗಳ ಮೇರೆಗೆ ಕರೆದೊಯ್ಯಬೇಕಾಗುತ್ತದೆ. ಬಸ್ಸು ಮತ್ತು ರೈಲುಗಳಲ್ಲಿ ಸಾಗಿಸಲು ನಿಯಮಗಳು ಒಪ್ಪಿಕೊಳ್ಳುವುದಿಲ್ಲ. ಸಹ ಪ್ರಯಾಣಿಕರೂ ತೊಂದರೆ ಅನುಭವಿಸಬೇಕೆಂಬ ಕಾರಣದಿಂದ ನಿರ್ಬಂಧಿಸಲಾಗಿದೆ. ಕೆಲವು ರೈಲುಗಳಲ್ಲಿ ಪೂರ್ವಾನುಮತಿ ಪಡೆದು ವಿಶೇಷ ಕಂಪಾರ್ಟ್ ಮೆಂಟ್ ಗಳಲ್ಲಿ ಕೊಂಡೊಯ್ಯಲು ರೈಲ್ವೆ ಇಲಾಖೆ ಅನುಮತಿ ನೀಡಿದೆ.

ನಾಯಿಗಳು ಅಥವಾ ಇತರ ಸಾಕುಪ್ರಾಣಿಗಳನ್ನು ರೈಲುಗಳಲ್ಲಿ ಸಾಗಿಸಬೇಕಾದರೆ, ಅವುಗಳನ್ನು ವಿಶೇಷ ವಿಭಾಗಗಳಲ್ಲಿ ಬೋನ್‌ನಲ್ಲಿರಿಸಿ ಲಾಕ್ ಮಾಡಬೇಕು. ಇದರಿಂದ ಇತರ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಆದಾಗ್ಯೂ, ಅನೇಕ ಮಾಲೀಕರು ತಮ್ಮ ಸಾಕುಪ್ರಾಣಿಗಳನ್ನು ಬೋನ್‌ನಲ್ಲಿರಿಸಲು ಬಯಸುವುದಿಲ್ಲ. ಇದರಿಂದಾಗಿ ಪ್ರಾಣಿ ಪ್ರಿಯರು ಮತ್ತು ಸಾಕುಪ್ರಾಣಿಗಳ ಮಾಲೀಕರಿಂದ ಬಂದ ಮನವಿಯಂತೆ ರೈಲ್ವೆ ಇಲಾಖೆ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಅವರ ಗಾಗಿ ಹೆಚ್ಚು ವಿಶೇಷ ರಚನೆಗಳನ್ನು ಮಾಡಿದೆ. ಇದರ ಪ್ರಕಾರ, ಮಾಲೀಕರು ತಮ್ಮ ಸಾಕುಪ್ರಾಣಿಗಳನ್ನು ತಮ್ಮೊಂದಿಗೆ ಕಂಪಾರ್ಟ್‌ಮೆಂಟ್‌ಗಳಲ್ಲಿ ತೆಗೆದುಕೊಳ್ಳಬಹುದು. ಇದಲ್ಲದೆ, ಅವರು ಮಲಗಲು ಅಲ್ಲಿ ವಿಶೇಷ ವ್ಯವಸ್ಥೆ ಕೂಡ ಮಾಡಲಾಗಿದೆ.

ತಮ್ಮ ಸಾಕು ನಾಯಿಯೊಂದಿಗೆ ಮಲಗಲು ಹಾಸಿಗೆಗಳನ್ನು ಮಾಡಲಾಗಿದೆ. ಪ್ರಯಾಣಿಕರು ತಮ್ಮ ಸಾಕು ನಾಯಿಗಳೊಂದಿಗೆ ಹಾಯಾಗಿ ಮಲಗಿದ್ದಾರೆ. ಇತ್ತೀಚೆಗಷ್ಟೇ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಭಾರತೀಯ ರೈಲ್ವೆ 24×7 ಸೇವೆಗಳನ್ನು ಒದಗಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಅಶ್ವಿನಿ ವೈಷ್ಣವ್ ಅವರು ಶೇರ್ ಮಾಡಿರುವ ವಿಡಿಯೋದಲ್ಲಿ..ಮಹಿಳೆಯೊಬ್ಬರು ತಮ್ಮ ಬೆಡ್‌ ಮೇಲೆ ತಮ್ಮ ಸಾಕು ನಾಯಿಯೊಂದಿಗೆ ಮಲಗಿರುವ ದೃಶ್ಯವಿದೆ. ಈ ವಿಡಿಯೋ ರೈಲ್ವೆಯಲ್ಲಿ ತಂದಿರುವ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!