ಫೋನ್‌ನಲ್ಲಿ ಮಾತಾಡ್ತಾ ಹೋಗುತ್ತಿದ್ದ ವೇಳೆ ಮ್ಯಾನ್​​ಹೋಲ್​​ನೊಳಗೆ ಬಿದ್ದ ಮಹಿಳೆ: ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಿಹಾರ ಪಾಟ್ನಾ ಮುನ್ಸಿಪಲ್ ಕಾರ್ಪೋರೇಷನ್​​ ನಿರ್ಲಕ್ಷ್ಯದಿಂದಾಗಿ ಮಹಿಳೆಯೋರ್ವಳು ಮ್ಯಾನ್​ಹೋಲ್​​ನಲ್ಲಿ ಬಿದ್ದಿರುವ ಘಟನೆ ಅಲಂಗಂಜ್​​ನಲ್ಲಿ ನಡೆದಿದೆ.
ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಹಿಳೆಯೊಬ್ಬರು ಮೊಬೈಲ್ ನಲ್ಲಿ ಮಾತನಾಡುತ್ತಾ ರಸ್ತೆಯಲ್ಲಿ ಸಾಗುವ ಸಂದರ್ಭದಲ್ಲಿ, ಮ್ಯಾನ್ ವೋಲ್ ತೆರೆದಿರೋದನ್ನು ಗಮನಿಸದೇ ದಿಡೀರ್ ಅದರೊಳಗೆ ಬಿದ್ದಿರೋ ದೃಶ್ಯಾವಳಿ ವೀಡಿಯೋದಲ್ಲಿದೆ.

ಮ್ಯಾನ್ ವೋಲ್ ನಲ್ಲಿ ಮಹಿಳೆ ಬಿದ್ದ ಕೂಡಲೇ, ಮಹಿಳೆ ಬಿದ್ದಿದ್ದನ್ನು ಗಮನಿಸಿದಂತ ಸ್ಥಳೀಯರು ಕೂಡಲೇ ಆಕೆಯನ್ನು ಎತ್ತಿ ರಕ್ಷಣೆ ಮಾಡಿದ್ದಾರೆ. ಸಣ್ಣ-ಪುಟ್ಟ ಗಾಯವಾಗಿರೋದು ಬಿಟ್ಟರೇ ಪ್ರಾಣಾಪಾಯದಿಂದ ಮಹಿಳೆ ಪಾರಾಗಿರೋದಾಗಿ ತಿಳಿದು ಬಂದಿದೆ.
ಮುನ್ಸಿಪಲ್ ಕಾರ್ಪೋರೇಷನ್​ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಮ್ಯಾನ್​ಹೋಲ್​ಗಳನ್ನು ಮುಚ್ಚದೆ ಹಾಗೆಯೇ ಬಿಟ್ಟಿರುವುದು ಇಂತಹ ದುರಂತ ನಡೆಯಲು ಕಾರಣವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!