October 9, 2026
Friday, October 9, 2026
spot_img

ರೈಲಿನಲ್ಲಿ ಮಹಿಳೆಯ ಹ್ಯಾಂಡ್‌ಬ್ಯಾಗ್ ಕಳವು: ಚಿನ್ನಾಭರಣ, ನಗದು ಎಗರಿಸಿದ ಕಳ್ಳರು

ಹೊಸದಿಗಂತ ವರದಿ ಅಂಕೋಲಾ:

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ ಬಂಗಾರದ ಆಭರಣ ಮತ್ತು ನಗದು ಹಣ ಇರುವ ಹ್ಯಾಂಡ್ ಬ್ಯಾಗ್ ಗೋಕರ್ಣ ರಸ್ತೆ ರೈಲ್ವೆ ನಿಲ್ದಾಣದ ಬಳಿ ಕಳ್ಳತನ ಮಾಡಲಾಗಿದ್ದು ಅಂಕೋಲಾ ಪೊಲೀಸ್ ಠಾಣೆಗೆ ದೂರು ಹಸ್ತಾಂತರ ಮಾಡಲಾಗಿದೆ.

ರಾಜಸ್ತಾನ ಜೈಪುರ ವೈಶಾಲಿನಗರ ನಿವಾಸಿ ಸರಸ್ವತಿ ಅಮಾಸ್ ಎನ್ನುವವರು ಅಗಸ್ಟ್ 30 ರಂದು ತನ್ನ ಪತಿಯೊಂದಿಗೆ ಮರುಸಾಗರ ಎಕ್ಸಪ್ರೆಸ್ ರೈಲಿನಲ್ಲಿ ಕೇರಳದ ಎರ್ನಕುಲಂನಿಂದ ಜೈಪುರಕ್ಕೆ ಪ್ರಯಾಣ ಬೆಳೆಸಿದ್ದು ಅಗಸ್ಟ್ 31 ರಂದು ಬೆಳಗಿನ ಜಾವ 6.30 ರ ಸುಮಾರಿಗೆ ಗೋಕರ್ಣ ರಸ್ತೆ ರೈಲ್ವೆ ನಿಲ್ದಾಣದ ಬಳಿ ಬಂಗಾರದ ಆಭರಣಗಳು,2 ಸಾವಿರ ರೂಪಾಯಿ ನಗದು ಮತ್ತು ಆಧಾರ ಕಾರ್ಡ್ ಇರುವ ಹ್ಯಾಂಡ್ ಬ್ಯಾಗ್ ಕಳ್ಳತನ ನಡೆದಿದೆ.

ಈ ಕುರಿತಂತೆ ಜೈಪುರ್ ಅಜ್ಮೀರ್ ಜಂಕ್ಷನ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಈ ಮೇಲ್ ಮೂಲಕ ಅಂಕೋಲಾ ಪೊಲೀಸ್ ಠಾಣೆಗೆ ದೂರು ಹಸ್ತಾಂತರವಾಗಿದೆ.

Must Read