Thursday, March 23, 2023

Latest Posts

ನವೋದ್ದಿಮೆಗಳಲ್ಲೂ ಮಹಿಳೆಯರದ್ದೇ ಮೇಲುಗೈ: ಪುರುಷರಿಗಿಂತ ಮಹಿಳಾ ಸ್ಟಾರ್ಟಪ್‌ಗಳಲ್ಲಿಯೇ ಹೆಚ್ಚು ಹಣ ಹೂಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್‌ ನಂತರದ ಕಾಲಘಟ್ಟದ ಆರ್ಥಿಕ ಅನಿಶ್ಚಿತತೆಗಳಿಂದ ನವೋದ್ದಿಮೆ ಕ್ಷೇತ್ರವನ್ನು ಬಾಧಿಸುತ್ತಿರುವ ಹಣಕಾಸಿನ ಚಳಿಗಾಲದ ನಡುವೆಯೂ ಭಾರತದ ಮಹಿಳಾ ನವೋದ್ಯಮಿಗಳು ಹೂಡಿಕೆಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ. Tracxn ನಡೆಸಿದ ಅಧ್ಯಯನದ ಪ್ರಕಾರ ಭಾರತದ ಟೆಕ್ ಉದ್ಯಮದಲ್ಲಿ ಮಹಿಳಾ ಉದ್ಯಮಿಗಳ ನೇತೃತ್ವದ ಸ್ಟಾರ್ಟ್‌ಅಪ್‌ಗಳು 8 ಪ್ರತಿಶತದಷ್ಟು ಬೆಳೆದಿವೆ.

ಒಟ್ಟಾರೆಯಾಗಿ ನವೋದ್ದಿಮೆ ಕ್ಷೇತ್ರದಲ್ಲಿ ಹೂಡಿಕೆಯಾದ ಹಣದಲ್ಲಿ ಮಹಿಳಾ ನವೋದ್ಯಮಿಗಳ ಉದ್ದಿಮೆಗೆಗಳಿಗೆ ಹೂಡಿಕೆಯಾದ ಹಣದ ಪಾಲು ವರ್ಷದಿಂದ ವರ್ಷಕ್ಕೆ ಹಚ್ಚಳವಾಗಿದೆ. 2021ರಲ್ಲಿ ಮಹಿಳಾ ನವೋದ್ದಿಮೆಗಳ ಹೂಡಿಕೆ ಪಾಲು 11 ಶೇಕಡಾದಷ್ಟಿತ್ತು. ಇದು 2022ರಲ್ಲಿ 16 ಶೇಕಡಾಗೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ. ಮಹಿಳಾ ನೇತೃತ್ವದ ಸ್ಟಾರ್ಟ್‌ಅಪ್‌ಗಳಲ್ಲಿ ಸಕ್ರಿಯ ಹೂಡಿಕೆದಾರರ ಸಂಖ್ಯೆಯು 2010 ರಿಂದ ಗಣನೀಯವಾಗಿ ಏರಿದ್ದು 2021ರಲ್ಲಿ ವರ್ಷದಿಂದ ವರ್ಷಕ್ಕೆ 42 ಶೇಕಡಾ ಹೆಚ್ಚಳ ದಾಖಲಾಗಿದೆ.

ಭಾರತದ ಪ್ರಮುಖ ನಗರಗಳಲ್ಲಿ, ಬೆಂಗಳೂರಿನಲ್ಲಿ ಮಹಿಳಾ ನೇತೃತ್ವದ ಸ್ಟಾರ್ಟ್‌ಅಪ್‌ಗಳು ಅತಿ ಹೆಚ್ಚು ಹಣವನ್ನು ಆಕರ್ಷಿಸಿದ್ದು ಬರೋಬ್ಬರಿ 11.3 ಬಿಲಿಯನ್‌ ಡಾಲರ್‌ ಹಣವನ್ನು ಸಂಗ್ರಹಿಸಿವೆ. ನಂತರದ ಸ್ಥಾನದಲ್ಲಿ ದೆಹಲಿಯಿದ್ದು 5.7 ಬಿಲಿಯನ್‌ ಡಾಲರ್‌ ಸಂಗ್ರಹವಾಗಿದೆ. 3.5 ಬಿಲಿಯನ್‌ ಡಾಲರ್‌ ಸಂಗ್ರಹಿಸಿರುವ ಮುಂಬೈ 3 ನೇ ಸ್ಥಾನದಲ್ಲಿದೆ. 2022ರ ಹೂಡಿಕೆ ಕೊರತೆಯ ಹೊರತಾಗಿಯೂ ಮಹಿಳಾ ನೇತೃತ್ವದ ಸ್ಟಾರ್ಟಪ್‌ ಗಳು ಭಾರತದ ನವೋದ್ದಿಮೆ ಪರಿಸರ ವ್ಯವಸ್ಥೆಯಲ್ಲಿ ಉತ್ತಮ ಬೆಳವಣಿಗೆ ದಾಖಲಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!