Tuesday, March 28, 2023

Latest Posts

WOMEN’S DAY | ಮಹಿಳೆಯರೇ ಈ ವಿಷಯಗಳಿಗೆ ಗಿಲ್ಟ್ ಬೇಡ, ಮನಸ್ಸಿನಲ್ಲಿಟ್ಟುಕೊಂಡು ಕೊರಗೋದೂ ಬೇಡ!

ಮಹಿಳೆಯರ ಗುಣವೇ ಅಷ್ಟು, ಮಾಡೋದು ಮಾಡೋದೇ ಆದರೆ ರೆಗ್ರೆಟ್ ಮಾಡೋದು ಮಾಮೂಲು ಅಭ್ಯಾಸ. ಕೆಲವೊಮ್ಮೆ ಇದು ಒಳ್ಳೆಯದು ಆದರೆ ಕೆಲವೊಮ್ಮೆ ಸರಿಯಲ್ಲ.ನಿಮ್ಮ ಹೆಮ್ಮೆಯ ವಿಷಯಗಳಿಗೆ ಗಿಲ್ಟ್ ಮಾಡಿಕೊಳ್ಳುತ್ತಾ ಹೋಗುವ ಅಭ್ಯಾಸ ಹೆಚ್ಚಾಗುತ್ತಿದ್ದಂತೆಯೇ ನಿಮ್ಮನ್ನು ನೀವು ಕಳೆದುಕೊಳ್ಳುತ್ತೀರಿ ಎಚ್ಚರ!

  • ಪತಿ/ಬಾಯ್‌ಫ್ರೆಂಡ್‌ಗಿಂತ ಹೆಚ್ಚು ಟ್ಯಾಲೆಂಟೆಡ್ ನೀವಾಗಿದ್ರೆ, ಅವರಿಗಿಂತ ಸಂಬಳ ಹೆಚ್ಚು ನಿಮ್ಮದಾಗಿದ್ರೆ ಕೊರಗೋ ಅವಶ್ಯಕತೆ ಇಲ್ಲ.
  • ಮಹಿಳೆಯರಿಗೆ ಯೋಚನಾ ಶಕ್ತಿ ಜಾಸ್ತಿ, ನೀವು ನೀಡಿದ ವಾರ್ನಿಂಗ್ ಸರಿಯಾದಾಗ ಕೆಟ್ಟದಾಗುತ್ತೆ ಎಂದು ನಾನು ಹೇಳಿದ್ದೆ ಹಾಗೇ ಆಯ್ತು ಎಂದು ಬೇಸರಿಸಿಕೊಳ್ಳೋದು ಬೇಡ.
  • ಬ್ಯುಸಿಯಾಗಿದ್ದರೂ ಶಾಪಿಂಗ್, ಸ್ಕಿನ್‌ಕೇರ್‌ಗೆ ದಿನದ 10 ನಿಮಿಷ ಕೊಟ್ಟಾಗ, ನಾನು ಟೈಮ್ ವೇಸ್ಟ್ ಮಾಡ್ತೀದ್ದೀನಾ ಅನ್ನೋ ಗಿಲ್ಟ್ ಕಿತ್ತೆಸೆಯಿರಿ.
  • ಅಡುಗೆ ಮಾಡೋದಕ್ಕೆ ಬರೋದಿಲ್ಲ. ಸರಿ ಈಗೇನಾಯ್ತು? ಭೂಮಿ ಮೇಲೆ ಎಷ್ಟೋ ಜನರಿಗೆ ಅಡುಗೆ ಗೊತ್ತಿಲ್ಲ, ಇದಕ್ಕೆ ನಿಮ್ಮನ್ನು ನೀವು ದೂಷಿಸೋದು ತಪ್ಪು.
  • ಬಾಯ್‌ಫ್ರೆಂಡ್ ಅಥವಾ ಪತಿ ನಿಮ್ಮಿಂದ ದೂರಾದಾಗ, ನಾನೇ ಏನೋ ತಪ್ಪು ಮಾಡಿದ್ದೇನೆ, ಅವನನ್ನು ಖುಷಿಯಾಗಿ ನೋಡಿಕೊಳ್ಳೋದರಲ್ಲಿ ನಾನೇ ಸೋತಿದ್ದೇನೆ ಎನ್ನುವ ಭಾವನೆ ಬೇಡ.
  • ಗಂಟೆಗಟ್ಟಲೆ ಸ್ನಾನ, ಮೇಕಪ್‌ಗೆ ಸಮಯ, ಬಟ್ಟೆ ಆರಿಸೋಕೆ ಹೆಚ್ಚು ಸಮಯ, ನಿಧಾನವಾಗಿ ತಿನ್ನೋ ಅಭ್ಯಾಸ ಇದ್ಯಾವುದಕ್ಕೂ ಗಿಲ್ಟ್ ಬೇಡ, Be you the world will adjust  ಅನ್ನೋ ಮಾತನ್ನು ಕೇಳಿಲ್ವಾ?
  • ನಾನು ಹುಡುಗಿ ಗಂಡ ಅಥವಾ ಮನೆಯವರು ಫೋನ್ ಮಾಡಿದಾಗ ತಕ್ಷಣ ಎತ್ತಬೇಕು, ಅವರು ತಪ್ಪು ತಿಳ್ಕೋತಾರೆ ಅನ್ನೋ ಭಾವನೆ ಯೂಸ್‌ಲೆಸ್!
  • ನಿಮ್ಮ ಮನೆಯನ್ನು ಸದಾ ಶುಚಿಯಾಗಿಟ್ಟುಕೊಳ್ಳೋಕೆ ಆಗದೇ ಇರಬಹುದು, ಕೆಲವೊಮ್ಮೆ ಇದು ಕಾಮನ್. ನೀವು ಮನುಷ್ಯ ತಾನೆ, ಮನೆ ಕ್ಲೀನಿಂಗ್ ಬರೀ ನಿಮ್ಮ ಜವಾಬ್ದಾರಿ ಅಲ್ಲ ಅನ್ನೋದು ನೆನಪಿರಲಿ.
  • ನಾನು ನೋಡೋ ಫಿಲಂ, ಓದೋ ಬುಕ್, ಕೇಳೋ ಹಾಡು ಬೇರೆಯವರಿಗೆ ಇಷ್ಟ ಆಗೋದಿಲ್ವೇನೋ ಅಂತ ಅವರಿಗಿಷ್ಟದ, ನಿಮಗಿಷ್ಟ ಇಲ್ಲದ ಸಿನಿಮಾ ನೋಡೋದು ಬೇಡ.
  • ಭಾವನೆಗಳನ್ನು ಬಾಯ್ಬಿಟ್ಟು ಹೇಳೋದಕ್ಕೆ ಬೇಜಾರೇ ಬೇಡ, ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗೋ ಬದಲು ಹೊರಹಾಕಿದ್ದೀರಿ, ಎದುರಿನವರಿಗೆ ಸ್ವಲ್ಪ ನೋವಾಗಿದ್ರೂ ರಿಯಾಲಿಟಿ ಅರ್ಥ ಆಯ್ತಾ ಯೋಚಿಸಿ.
  • ನೀವು ಸಿಂಗಲ್ ಆಗಿದ್ದೀರಾ? ಡೇಟಿಂಗ್‌ನಲ್ಲಿದ್ದೀರಾ? ಲಿವ್ ಇನ್‌ನಲ್ಲಿದ್ದೀರಾ? ಮದುವೆಯಾಗಿದ್ದೀರಾ? ಡಿವೋರ್ಸ್ ಕೊಡ್ತಾ ಇದ್ದೀರಾ? ಗಂಡನಿಂದ ಹಾಗೇ ದೂರಾಗಿದ್ದೀರಾ? ಮರುಮದುವೆ ಆಗ್ತಿದ್ದೀರಾ? ಎಲ್ಲವೂ ನಿಮ್ಮ ಖಾಸಗಿ ವಿಷಯ ಗಿಲ್ಟ್ ಯಾಕೆ?
  • ಸ್ವಲ್ಪ ಟೀ ಮಾಡ್ಕೊಂಡ್ ಬಾ, ಸುಸ್ತಾಗಿದ್ರೂ ಎದ್ದು ಹೋಗಿ ಟೀ ಮಾಡ್ತೀರಾ? ಸುಸ್ತಾಗಿದೆ ಸ್ವಲ್ಪ ಹೊತ್ತು ಬಿಟ್ಟು ಮಾಡ್ತೀನಿ ಅಥವಾ ನೀವೇ ಮಾಡೋಕೆ ಆಗತ್ತಾ ಕೇಳೋದಕ್ಕೆ ದುಃಖ ಯಾಕೆ? ನೋ ಅನ್ನೋದನ್ನು ಕಲಿಯಿರಿ.
  • ತುಂಬಾ ದಪ್ಪ ಆಗಿದ್ಯಾ, ಸಣ್ಣ ಆಗಬೇಕು ನೀನು..
    ನಿಮ್ಮ ದೇಹ ನಿಮ್ಮ ಇಷ್ಟ, ಆರೋಗ್ಯ ಕಾಪಾಡಿಕೊಂಡರೆ ಸಾಕು, ನಿಮ್ಮ ದೇಹವನ್ನು ಇರುವಂತೆಯೇ ಪ್ರೀತಿಸಿ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!