ಮಹಿಳೆಯರಿಗೂ ಒಂದಕ್ಕಿಂತ ಹೆಚ್ಚು ಗಂಡಂದಿರನ್ನು ಹೊಂದುವ ಹಕ್ಕು ಬೇಕು: ಮುಸ್ಲಿಂ ಕಾನೂನುಗಳ ವಿರುದ್ಧ ಜಾವೇದ್ ಅಖ್ತರ್ ಕಿಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಪ್ರಸಿದ್ಧ ಗೀತರಚನೆಕಾರ ಜಾವೇದ್ ಅಖ್ತರ್ ಆಗಾಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿರುತ್ತಾರೆ. ಇದೀಗ ಇತ್ತೀಚಿನ ಸಂದರ್ಶನವೊಂದರಲ್ಲಿ , ಮುಸ್ಲಿಂ ಕಾನೂನುಗಳ ವಿರುದ್ಧ ಕಿಡಿ ಕಾರಿದ್ದು, ಇದು ಸಂಪೂರ್ಣವಾಗಿ ತಪ್ಪು ಎಂದು ಹೇಳಿದ್ದಾರೆ.

ಮುಸ್ಲಿಂ ಕಾನೂನುಗಳು, ಸಮಾನತೆ ಇತರೆ ವಿಚಾರಗಳ ಬಗ್ಗೆ ಸಂದರ್ಶನದಲ್ಲಿ ಮಾತನಾಡುವಾಗ ಜಾವೇದ್‌ ಅಖ್ತರ್‌ , ಮುಸ್ಲಿಂ ಗಂಡಂದಿರು ಏಕಕಾಲದಲ್ಲಿ 4 ಮದುವೆಗಳನ್ನು ಹೊಂದುವ ಹಕ್ಕನ್ನು ಹೊಂದಿದ್ದಾರೆ. ಇದೇ ರೀತಿ, ಮಹಿಳೆಯರು ಕೂಡ ಒಂದಕ್ಕಿಂತ ಹೆಚ್ಚು ಗಂಡಂದಿರನ್ನು ಹೊಂದುವ ಹಕ್ಕನ್ನು ಹೊಂದಿರಬೇಕು ಎಂದು ಹೇಳಿದ್ದಾರೆ. ಒಂದಕ್ಕಿಂತ ಹೆಚ್ಚು ಹೆಂಡತಿಯರನ್ನು ಹೊಂದುವುದು ಪುರುಷ ಮತ್ತು ಮಹಿಳೆಯ ನಡುವೆ ಸಮಾನತೆ ಉಂಟು ಮಾಡಲ್ಲ ಎಂದೂ ಅವರು ಹೇಳಿದರು.

ಒಂದು ಬಾರಿಗೆ ಒಂದಕ್ಕಿಂತ ಹೆಚ್ಚು ಮದುವೆಗಳನ್ನು ಮಾಡುವುದು ದೇಶದ ಕಾನೂನು ಮತ್ತು ಸಂವಿಧಾನದ ನಿಯಮಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದೂ ಜಾವೇದ್‌ ಅಖ್ತರ್‌ ಹೇಳಿದ್ದಾರೆ. ಹಾಗೂ, ಏಕರೂಪ ನಾಗರಿಕ ಸಂಹಿತೆ ಎಂದರೆ ಎಲ್ಲಾ ಸಮುದಾಯಗಳಿಗೆ ಒಂದೇ ಕಾನೂನು ಇರಬೇಕು ಎಂದು ಮಾತ್ರವಲ್ಲ. ಬದಲಿಗೆ ಇದು ಮಹಿಳೆ ಮತ್ತು ಪುರುಷರ ನಡುವಿನ ಸಮಾನತೆ ಎಂದೂ ಅರ್ಥ. ಇಬ್ಬರಿಗೂ ಒಂದೇ ಮಾನದಂಡ ಇರಬೇಕು ಎಂದೂ ಅವರು ಹೇಳಿದ್ದಾರೆ.

ಈಗಾಗಲೇ ಹಲವರು ಏಕರೂಪ ನಾಗರಿಕ ಸಂಹಿತೆ ಅನುಸರಿಸುತ್ತಿದ್ದಾರೆ. ಯಾರಿಗೆ ಪುರುಷ ಮತ್ತು ಮಹಿಳೆ ಸಮಾನತೆಯ ಕಲ್ಪನೆ ಇದೆಯೋ ಅವರು ಏಕರೂಪ ನಾಗರಿಕ ಸಂಹಿತೆಯಲ್ಲಿ ಬದುಕಬೇಕು ಎಂದು ಹೇಳಿದರು.

ನಾನು ಕೂಡ ಮುಂದೆ ತನ್ನ ಮಗ ಹಾಗೂ ಮಗಳಿಗೆ ಆಸ್ತಿಯಲ್ಲಿ ಸಮಾನ ಹಕ್ಕು ನೀಡುವೆ. ನನ್ನ ಸಂಪತ್ತನ್ನು ಗಂಡು-ಹೆಣ್ಣು ಮಕ್ಕಳ ನಡುವೆ ತಾರತಮ್ಯ ಮಾಡದೆ ಸಮಾನವಾಗಿ ಹಂಚುತ್ತೇನೆ. ಅಲ್ಲದೆ, ವಿಚ್ಛೇದನದ ಸಂದರ್ಭದಲ್ಲಿ ಹೆಂಡತಿ ಮತ್ತು ಮಕ್ಕಳ ಜೀವನಾಂಶವನ್ನು ಪಾವತಿಸುವುದನ್ನು ಈ ಕಾಯ್ದೆಯು ಕಡ್ಡಾಯಗೊಳಿಸದಿರುವುದು ಕೂಡ ತಪ್ಪು ಎಂದೂ ಅವರು ಹೇಳಿದರು.

ಇಂದು ದೇಶದ ಸಮಸ್ಯೆ ಎಂದರೆ ದೇಶವನ್ನು ಸರ್ಕಾರ ಮತ್ತು ಸರ್ಕಾರವನ್ನು ದೇಶ ಎಂದು ಪರಿಗಣಿಸಲಾಗುತ್ತಿದೆ. ಸರ್ಕಾರಗಳು ಬರುತ್ತವೆ ಹೋಗುತ್ತವೆ, ಆದರೆ ದೇಶ ಯಾವಾಗಲೂ ಇರುತ್ತದೆ. ಯಾರಾದರೂ ಸರ್ಕಾರವನ್ನು ವಿರೋಧಿಸಿದರೆ ಅವರನ್ನು ದೇಶದ್ರೋಹಿ ಎಂದು ಘೋಷಿಸಲಾಗುತ್ತದೆ. ಆದರೆ ಈ ರೀತಿ ಆಗಬಾರದು ಎಂದೂ ಜಾವೇದ್‌ ಅಖ್ತರ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!