ಪ್ರಾಚೀನ ಸಂಪ್ರದಾಯ: ಅಧಿಕಾರಿಗಳು ಕೆಸರು ನೀರಿನಲ್ಲಿ ಸ್ನಾನ ಮಾಡಿದ್ರೆ ಮಳೆ ಬರುತ್ತಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಜೆಪಿ ಶಾಸಕ ಜಯಮಂಗಲ್ ಕನೋಜಿಯಾ ಮೇಲೆ ಸ್ಥಳೀಯರು ಕೆಸರು ಸ್ನಾನ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಮಹಾರಾಜ್ ಗಂಜ್‌ನಲ್ಲಿ ನಡೆದಿದೆ. ಶಾಸಕರ ಜತೆಗೆ ನಗರಸಭೆ ಅಧ್ಯಕ್ಷ ಕೃಷ್ಣಗೋಪಾಲ್ ಜೈಸ್ವಾಲ್ ಕೂಡ ಇದೇ ಗೌರವ ದಕ್ಕಿದೆ. ಈ ವೇಳೆ ಹೆಂಗಸರೆಲ್ಲ ಸಂತೋಷದಿಂದ ಹಾಡುಗಳನ್ನು ಹಾಡುತ್ತಾ ರಂಜಿಸಿದ್ದಾರೆ. ಇದೆಲ್ಲಾ ಅಲ್ಲಿನ ಬಿಸಿಲಿನ ತಾಪ ತಗ್ಗಿಸುವ ಆಚರಣೆಯ ಭಾಗವಂತೆ. ನಗರದ ಮುಖ್ಯಸ್ಥನಿಗೆ ಕೆಸರು ಸ್ನಾನ ಮಾಡಿಸಿದರೆ ಇಂದ್ರನು ಪ್ರಸನ್ನನಾಗುತ್ತಾನೆ ಎಂಬ ನಂಬಿಕೆ ಇದೆ.

ಇಂದ್ರನನ್ನು ಮೆಚ್ಚಿಸಲು ಮಕ್ಕಳೂ ಸಹ ಕೆಸರು ಮಣ್ಣಿನಲ್ಲಿ ಸ್ನಾನ ಮಾಡುತ್ತಾರೆ ಇದನ್ನು ಸ್ಥಳೀಯವಾಗಿ ʻಕಲ್ ಕಲುತಿʼ ಎಂದು ಕರೆಯುವುದಾಗಿ ಸ್ಥಳೀಯರು ಹೇಳಿದ್ದಾರೆ. ನಗರಾಧಪತಿ ಕೆಸರು ಸ್ನಾನ ಮಾಡುವುದರಿಂದ ವರುಣ ಸಂತೋಷಗೊಂಡು ಮಳೆ ಸುರಿಸುತ್ತಾನೆ ಎಂಬುದು ಪುರಾತನ ನಂಬಿಕೆ.

ಈ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಎಂಎಲ್‌ಎ ಕನೋಜಿಯಾ, ಪ್ರಾಚೀನ ಸಂಪ್ರದಾಯದ ಅಂಗವಾಗಿ ಅನೇಕ ಮಹಿಳೆಯರು ಮತ್ತು ಮಕ್ಕಳು ಕೆಸರು ಸ್ನಾನ ಮಾಡಿದ್ದಾರೆ. ಆ ಪ್ರದೇಶದಲ್ಲಿ ಓಡಾಡುತ್ತಿದ್ದಾಗ ಅನೇಕ ಮಹಿಳೆಯರು ಮತ್ತು ಮಕ್ಕಳು ನನ್ನ ಮೇಲೆ ಕೆಸರು ಎರಚಿದರು. ಇಂದ್ರನನ್ನು ಮೆಚ್ಚಿಸಲು ಅವರು ಅನುಸರಿಸುವ ಪುರಾತನ ಸಂಪ್ರದಾಯದ ಮೇಲೆ ನನಗೆ ನಂಬಿಕೆಯಿದೆ. ಶೀಘ್ರದಲ್ಲೇ ಮಳೆ ಬರಲಿ ಎಂದು ಅವರ ಪ್ರಾರ್ಥನೆ ಈಡೇರಲೆಂದು ಆಶಿಸುತ್ತೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!