ಫ್ರಾನ್ಸ್ ಅಧ್ಯಕ್ಷರ ಕೆನ್ನೆಗೆ ಹೊಡೆದ ಮಹಿಳೆ: 2ವರ್ಷಗಳಲ್ಲಿ ಇದು ಎರಡನೇ ಘಟನೆ, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಿಳೆಯೊಬ್ಬರು ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಕೆನ್ನೆಗೆ ಹೊಡೆದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸೋಮವಾರ (ನವೆಂಬರ್ 21, 2022)ಯಾವುದೋ ಒಂದು ಕಾರ್ಯಕ್ರಮದ ನಿಮಿತ್ತ ಇಮ್ಯಾನುಯೆಲ್ ನಡೆದುಕೊಂಡು ಹೋಗುತ್ತಿದ್ದಾಗ ಆಲಿವ್ ಹಸಿರು ಟಿ-ಶರ್ಟ್ ಧರಿಸಿದ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಇಮ್ಯಾನುಯೆಲ್ ಬಳಿ ಬಂದು ಅವರ ಕೆನ್ನೆಗೆ ಬಾರಿಸಿದ್ದಾರೆ. ಕೂಡಲೇ ಅಲ್ಲಿದ್ದ ಮ್ಯಾಕ್ರನ್ ಭದ್ರತಾ ಸಿಬ್ಬಂದಿ ಮಹಿಳೆಯನ್ನು ಪಕ್ಕಕ್ಕೆ ಎಳೆದೊಯ್ದರು.

ಮ್ಯಾಕ್ರನ್ ಎರಡು ವರ್ಷಗಳಲ್ಲಿ ಎರಡು ಬಾರಿ ನಾಗರಿಕರಿಂದ ಏಟು ತಿಂದಿದ್ದಾರೆ. ಜೂನ್ 2021 ರಲ್ಲಿ, ವ್ಯಕ್ತಿಯೊಬ್ಬರು ಮ್ಯಾಕ್ರನ್‌ಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದರು. ಈ ಘಟನೆ ಅಂದು ಜಗತ್ತಿನಾದ್ಯಂತ ಸಂಚಲನ ಮೂಡಿಸಿತ್ತು. ಅಧ್ಯಕ್ಷರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗೆ ಶಿಕ್ಷೆಯಾಗಿದೆ. ಇದಿಘ ಮಹಿಳೆಯೊಬ್ಬರು ಮ್ಯಾಕ್ರನ್‌ಗೆ ಮತ್ತೊಮ್ಮೆ ಕಪಾಳಮೋಕ್ಷ ಮಾಡಿ ಮತ್ತೊಂದು ಸಂಚಲನ ಮೂಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!