WOMEN | ಸ್ವಾಭಿಮಾನದ ಕೊರತೆ ಇರೋ ಮಹಿಳೆಯರು ಈ ರೀತಿ ವರ್ತಿಸುತ್ತಾರಂತೆ!

 ಸೆಲ್ಫ್ ರೆಸ್ಪೆಕ್ಟ್ ಅಥವಾ ಸ್ವಾಭಿಮಾನ ಜೀವನದಲ್ಲಿ ತುಂಬಾನೇ ಮುಖ್ಯ. ತಮಗೆ ಅವಮಾನ ಆಗುತ್ತಿದ್ದರೂ ಅದನ್ನು ಸಹಿಸಿಕೊಂಡು ಯಾರೂ ಹೆಚ್ಚು ಸಮಯ ಆ ಸ್ಥಳದಲ್ಲಿರಲು ಸಾಧ್ಯವಿಲ್ಲ. ಆದರೆ ಕೆಲವೊಬ್ಬರು ತಮಗೆ ಮಾಡುವ ಅವಮಾನಗಳನ್ನು ಸಹಿಸಿಕೊಂಡು ಬಾಳುತ್ತಾರೆ. ಮುಖ್ಯವಾಗಿ ಮಹಿಳೆಯರಲ್ಲಿ ಇಂತಹ ನಡವಳಿಕೆಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇಂತಹ ವ್ಯಕ್ತಿತ್ವ ಅವರದ್ದಾಗಿದ್ದಾರೆ ಅವರಲ್ಲಿ ಸ್ವಾಭಿಮಾನ ಎಂಬ ಅಂಶವೇ ಇಲ್ಲ ಎಂದಾಗಿದೆ. ಈ ಲೇಖನದಲ್ಲಿ ಸ್ವಾಭಿಮಾನದ ಕೊರತೆ ಇರೋ ಮಹಿಳೆಯರು ಹೇಗೆ ನಡೆದುಕೊಳ್ಳುತ್ತಾರೆ ಎನ್ನುವ ಬಗ್ಗೆ ಹೇಳ್ತೇವೆ.

ಅಗೌರವವನ್ನು ಸಹಿಸಿಕೊಳ್ಳುತ್ತಾರೆ: ನೀವಿರುವ ಸ್ಥಳದಲ್ಲಿ ಇಲ್ಲವೇ ಸ್ಥಾನದಲ್ಲಿ ನಿಮಗೆ ಅಗೌರವವುಂಟಾಗುತ್ತಿದೆ ಹಾಗೂ ನೀವು ಅದನ್ನು ಸಹಿಸಿಕೊಂಡೇ ಮುಂದುವರಿಯುತ್ತಿದ್ದೀರಿ ಎಂದಾದರೆ ನಿಮ್ಮಲ್ಲಿ ಸ್ವಾಭಿಮಾನದ ಕೊರತೆ ಇದೆ.

ತಮ್ಮ ಅಗತ್ಯಗಳನ್ನು ತಿರಸ್ಕರಿಸುತ್ತಾರೆ: ತಮ್ಮ ಬಗ್ಗೆ ಕಾಳಜಿ ತೋರದೆ ಇತರರ ಮೇಲೆ ಕಾಳಜಿ ತೋರುತ್ತಿದ್ದರೆ ಅವರಲ್ಲಿ ಸ್ವಾಭಿಮಾನ ಇಲ್ಲ ಎಂದರ್ಥ.

ಮೌಲ್ಯೀಕರಣ ಬಯಸುವುದು: ಯಾವುದಾದರೂ ಮಹಿಳೆ ಇತರರಿಂದ ತಮ್ಮ ಬಗ್ಗೆ ಅಥವಾ ಪ್ರತಿ ವಿಚಾರಗಳಲ್ಲಿ ಮೌಲ್ಯೀಕರಣವನ್ನು ಬಯಸುತ್ತಿದ್ದಾರೆ ಎಂದಾದರೆ ಅವರಲ್ಲಿ ಸ್ವಾಭಿಮಾನದ ಕೊರತೆ ಇದೆ.

ತಮ್ಮ ಸಾಧನೆಗಳನ್ನು ತಳ್ಳಿಬಿಡುತ್ತಾರೆ: ಮಹಿಳೆ ತನ್ನ ಸಾಧನೆಗಳನ್ನು ನಿರಂತರವಾಗಿ ತಳ್ಳಿಹಾಕುವುದು ಮಾಡುತ್ತಿದ್ದರೆ ಅವರಲ್ಲಿ ಸ್ವಾಭಿಮಾನದ ಕೊರತೆ ಇದೆ ಎಂದರ್ಥ.

ತಮ್ಮ ಸಮಯಕ್ಕೆ ಪ್ರಾಶಸ್ತ್ಯ ನೀಡುವುದಿಲ್ಲ: ಇತರರಿಗಾಗಿ ನಿಮ್ಮ ಸಮಯ ನಷ್ಟ ಮಾಡಿಕೊಳ್ಳುತ್ತಿದ್ದರೆ ಅದು ನಿಮ್ಮಲ್ಲಿರುವ ಸ್ವಾಭಿಮಾನದ ಕೊರತೆಯನ್ನು ಸೂಚಿಸುತ್ತದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!