ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಿದ್ದಾರೆ. ಮೇ 8 ರ ಬೆಳಿಗ್ಗೆಯಿಂದ ಮೇ 11 ರವರೆಗೆ ಕದನ ವಿರಾಮ ಇರಲಿದೆ ಎಂದು ಕ್ರೆಮ್ಲಿನ್ ಹೇಳಿದೆ.
ಮಾನವೀಯತೆಯ ಆಧಾರದ ಮೇಲೆ ರಷ್ಯಾ ವಿಜಯ ದಿನದ 80ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕದನ ವಿರಾಮವನ್ನು ಘೋಷಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಅವಧಿಯಲ್ಲಿ ಎಲ್ಲ ರೀತಿಯ ದಾಳಿಗಳನ್ನು ನಿಲ್ಲಿಸಲಾಗುತ್ತಿದೆʼ ಎಂದು ಹೇಳಿದೆ.ಉಕ್ರೇನ್ ಕೂಡ ಈ ಇದನ್ನು ಅನುಸರಿಸಬೇಕು. ಒಂದುವೇಳೆ ಉಕ್ರೇನ್ ಕಡೆಯಿಂದ ಕದನ ವಿರಾಮ ಉಲ್ಲಂಘನೆಯಾದರೆ ರಷ್ಯಾದ ಸಶಸ್ತ್ರ ಪಡೆ ಸೂಕ್ತ ಉತ್ತರ ನೀಡಲಿದೆ ಎಂದು ಪ್ರಕಟಣೆ ಎಚ್ಚರಿಸಿದೆ.