Asia Cup 2022| ಆತಿಥೇಯ ಬಾಂಗ್ಲಾ ತಂಡವನ್ನು ಮಣಿಸಿ ಸೆಮೀಸ್‌ಗೆ ಲಗ್ಗೆ ಇಟ್ಟ ಟೀಂ ಇಂಡಿಯಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮಹಿಳೆಯರ ಏಷ್ಯಾಕಪ್ 2022ರ 5 ನೇ ಪಂದ್ಯದಲ್ಲಿ 59 ರನ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಭಾರತದ ವನಿತೆಯರು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಸಿಲ್ಹೆಟ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಿತು. ಖಾಯಂ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ಅನುಪಸ್ಥಿತಿಯಲ್ಲಿ ಉಪನಾಯಕಿ ಸ್ಮೃತಿ ಮಂದಾನ ತಂಡವನ್ನು ಮುನ್ನಡೆಸಿದರು. ಬ್ಯಾಟಿಂಗ್‌ ಗೆ ಇಳಿದ ಶಫಾಲಿ ವರ್ಮಾ ಕೇವಲ 44 ಎಸೆತಗಳಲ್ಲಿ 55 ರನ್ ಸಿಡಿಸಿದರು. ಸ್ಮೃತಿ – ಶೆಫಾಲಿ ಜೋಡಿ ಬಾಂಗ್ಲಾ ಬೌಲರ್‌ ಗಳನ್ನು ಮನಬಂದಂತೆ ದಂಡಿಸಿ ಕೇವಲ 12 ಓವರ್‌ಗಳಲ್ಲಿ 96 ರನ್‌ಗಳನ್ನು ಕಲೆಹಾಕಿತು. ಈ ಹಂತದಲ್ಲಿ ನಾಯಕಿ ಸ್ಮೃತಿ ಮಂಧಾನ (47 ರನ್‌, 38 ಎಸೆತ) ರನೌಟ್ ಗೆ ಬಲಿಯಾದರು.
ಕೊನೆಯಲ್ಲಿ ಅಬ್ಬರಿಸಿದ ಜೆಮಿಮಾ ರಾಡ್ರಿಗಸ್ ಅಜೇಯ 35 ರನ್‌ ಕಲೆಕಾಕಿದ್ದರಿಂದ ಭಾರತವು ನಿಗದಿತ 20 ಓವರ್‌ ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 159 ರನ್ ಕಲೆಹಾಕಿತು. ) ಗುರಿ ಬೆನ್ನತ್ತಿದ ಬಾಂಗ್ಲಾದೇಶ ನಿರಂತರವಾಗಿ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಅಂತಿಮವಾಗಿ  ಭಾರತೀಯ ಬೌಲರ್‌ಗಳು ಗುರಿಯನ್ನು ಸುಲಭವಾಗಿ ರಕ್ಷಿಸಿಕೊಂಡರು. ಆತಿಥೇಯರನ್ನು 7 ವಿಕೆಟ್‌ ನಷ್ಟಕ್ಕೆ ಕೇವಲ 100 ರನ್‌ಗಳಿಗೆ ನಿರ್ಬಂಧಿಸಿದರು. ಬಾಂಗ್ಲಾ ಪರ ನಾಯಕಿ ನಿಗರ್ ಸುಲ್ತಾನ 36 ರನ್ ಗಳಿಸಿದರೆ, ಫರ್ಗಾನಾ ಹಕ್ 30 ರನ್ ಗಳಿಸಿದರು.
ಭಾರತದ ಪರ ಶಫಾಲಿ ವರ್ಮಾ ಹಾಗೂ ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್‌ಗಳು:
ಭಾರತ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 159 (ಶಫಾಲಿ ವರ್ಮಾ 55, ಸ್ಮೃತಿ ಮಂಧಾನ 47,  ಜೆಮಿಮಾ ರೋಡ್ರಿಗೀಸ್ ಔಟಾಗದೆ 35; ರುಮಾನಾ ಅಹ್ಮದ್ 3/27)
ಬಾಂಗ್ಲಾದೇಶ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 100 (ನಿಗರ್ ಸುಲ್ತಾನ 36; ಶಫಾಲಿ ವರ್ಮಾ 2/10, ದೀಪ್ತಿ 13)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!