ಶಸ್ತ್ರ ವ್ಯವಸ್ಥೆ ವಿಭಾಗ’ ಹೊಂದಲಿದೆ ವಾಯುಸೇನೆ, 3,400 ಕೋಟಿ ರುಪಾಯಿಗಳ ಉಳಿತಾಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್
ಶನಿವಾರ ಭಾರತೀಯ ವಾಯುಸೇನೆಯು ತನ್ನ 90ನೇ ವರ್ಷಾಚರಣೆಯನ್ನು ಆಚರಿಸಿಕೊಂಡ ಸಂದರ್ಭದಲ್ಲಿ ಭಾರತೀಯ ವಾಯುಸೇನೆ ಮುಖ್ಯಸ್ಥ ಏರ್ ಚೀಫ್ ಮಾರ್ಶಲ್ ವಿವೇಕ ರಾಮ ಚೌಧುರಿ ಹೊಸ ಘೋಷಣೆಯನ್ನು ಮಾಡಿದ್ದಾರೆ.
ವಾಯುಸೇನೆಯು ವೆಪನ್ ಸಿಸ್ಟಂ ಬ್ರಾಂಚ್ ಅರ್ಥಾತ್ ಪ್ರತ್ಯೇಕವಾದ ಶಸ್ತ್ರ ವ್ಯವಸ್ಥೆ ವಿಭಾಗವೊಂದನ್ನು ಹೊಂದುವುದಕ್ಕೆ ಕೇಂದ್ರ ಸರ್ಕಾರ ಸಮ್ಮತಿಸಿದೆ.
ವೈಮಾನಿಕ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಹಲವು ಶಸ್ತ್ರಗಳ ಸಹಾಯಕ ವ್ಯವಸ್ಥೆ ಒಂದಿದೆಯಲ್ಲ, ಅದೀಗ ಎಲ್ಲ ವಿಭಾಗಗಳಲ್ಲಿ ಚದುರಿಕೊಂಡಿದೆ. ಅದನ್ನು ಒಂದೆಡೆ ತಂದು ವೆಪನ್ ಸಿಸ್ಟಂ ಬ್ರಾಂಚ್ ರೂಪಿಸಲಾಗುತ್ತದೆ. ಇದರಲ್ಲಿ ವಾಯುಗುರಿಗಳನ್ನು ನಿರ್ದಿಷ್ಟವಾಗಿಸಿಕೊಂಡು ಕಾರ್ಯಾಚರಣೆ ಮಾಡುವ ಶಸ್ತ್ರ ಯೋಜಕರು, ಮಾನವರಹಿತ ವಿಮಾನಗಳನ್ನು ನಿರ್ವಹಿಸುವವರು, ಯುದ್ಧವಿಮಾನಗಳಲ್ಲಿ ಪೈಲಟ್ ಸೈನಿಕನ ಜತೆಯೇ ಕೂತು ಶಸ್ತ್ರಗಳನ್ನು ನಿರ್ವಹಿಸುವವರು ಇವರೆಲ್ಲ ಒಂದೇ ವಿಭಾಗದಡಿ ಕೆಲಸ ಮಾಡಲಿದ್ದಾರೆ.
ಇದರಿಂದ ವಾಯುಸೇನೆ ಸಾಮರ್ಥ್ಯ ಹೆಚ್ಚುವುದಲ್ಲದೇ, ಇದುವರೆಗೆ ಈ ನಿಟ್ಟಿನಲ್ಲಿ ಹಾರಾಟ ತರಬೇತಿ ಇನ್ನಿತರ ವ್ಯವಸ್ಥೆಗಳಿಗೆ ಬೇರೆಬೇರೆಯಾಗಿ ವ್ಯಯಿಸುತ್ತಿದ್ದ ಖರ್ಚುಗಳು ಕಡಿಮೆಯಾಗಿ 3,400 ಕೋಟಿ ರುಪಾಯಿಗಳಷ್ಟು ಉಳಿತಾಯವಾಗಲಿದೆ ಎಂದು ವಾಯುಸೇನೆ ಮುಖ್ಯಸ್ಥರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!