Thursday, March 30, 2023

Latest Posts

ಮಹಿಳಾ ದಿನ ವಿಶೇಷ : ವಿಕಲತೆ ಮೀರಿ ಬದುಕು ಕಟ್ಟಿಕೊಂಡವರಿವರು

ವೆಂಕಟೇಶ ಬಿ. ಇಮರಾಪೂರ

ಸಾಧನೆಗೆ ಅಂಗವೈಕಲ್ಯತೆ ಅಡ್ಡಿಯಾಗಲಾರದು, ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಲ್ಲಳು ಎನ್ನುವುದಕ್ಕೆ ಗದಗದ ಈ ಮಹಿಳಾ ತಂಡ ಸಾರ್ಥಕ‌ ಬದುಕಿಗೆ ಮಾದರಿಯಾಗಿದ್ದಾರೆ.

ನಗರದ ಸ್ಟೇಶನ್ ರಸ್ತೆಯಲ್ಲಿರುವ ಸೋನಾ ಗಿಫ್ಟ್ ಸೆಂಟರ್ ಗೆ ನೀವು ಭೇಟಿ ನೀಡಿದರೆ ಅಲ್ಲಿ 8-10 ಮಹಿಳೆಯರು ನಿಮ್ಮನ್ನು ಸ್ವಾಗತಿಸುತ್ತಾರೆ. ಉಲ್ಲೇಖನೀಯವೆಂದರೆ ಈ ಮಹಿಳೆಯರೆಲ್ಲ ವಿಕಲಚೇತನರು. ಕಾಯಕದಲ್ಲಿ ಅವರು ತೋರುವ ನಿಷ್ಠೆ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ದೈಹಿಕ ಸದೃಢರೂ ಕೆಲಸ‌ ಮಾಡಲು ಮೈಮುರಿಯುವಾಗ, ತಮ್ಮ ಅಂಗವಿಕಲತೆಯ ನೋವನ್ನು ಬದಿಗಿಟ್ಟು ಶ್ರಮಿಸುತ್ತಿರುವ ಈ ಮಹಿಳೆಯರು ಬದುಕು ಹಸನ ಮಾಡಿಕೊಂಡರಷ್ಟೇ ಅಲ್ಲದೇ ನಂಬಿ ಕೆಲಸ ನೀಡಿದ ಮಾಲಕರ‌ ಮನಸ್ಸನ್ನು ಗೆದ್ದಿದ್ದಾರೆ.

ನಗರದ ದೀನಬಂಧು ಹಾಗೂ ಅಕ್ಕಮಹಾದೇವಿ ಹಾಸ್ಟೆಲನಲ್ಲಿ ವಾಸ ಮಾಡುತ್ತಿರುವ ವಿವಿಧ ಜಿಲ್ಲೆಯ ಈ ಮಹಿಳೆಯರು ಎಸ್ ಎಸ್ ಎಲ್ ಸಿಯಿಂದ ಪದವಿವರೆಗೆ ಶಿಕ್ಷಣ ಪಡೆದಿದ್ದಾರೆ. ಮುಂದೆ ವೃತ್ತಿಯ ಬಗ್ಗೆ ಚಿಂತೆ ಎದುರಾದಾಗ ಸೋನಾ ಗಿಫ್ಟ್ ಸೆಂಟರ್ ಮಾಲೀಕ ಮನೋಜ ಶಾಹ ಈ ವಿಕಲಚೇತನ ಮಹಿಳೆಯರಿಗೆ ನೆರವಾದರು.

ಕಳೆದ ಎಂಟು ತಿಂಗಳಿಂದ ಅವರ ಪ್ರಾಮಾಣಿಕತೆ ಹಾಗೂ ಕರ್ತವ್ಯ ನಿಷ್ಠೆ ಮನಗಂಡು ಇಡೀ ಅಂಗಡಿಯ ಜವಾಬ್ದಾರಿ ಇವರಿಗೆ ಮಾಲಕರು ವಹಿಸಿದ್ದಾರೆ. ವಿಕಲಚೇತನ‌ ಮಹಿಳೆಯರಾದ ಶಕುಂತಲಾ ದೊಡ್ಡಮನಿ, ಅವ್ವಕ್ಕ ಚುರ್ಚಿಹಾಳ, ಕಲಾವತಿ ಗಾಣಗೇರ, ರಾಯಮ್ಮ ಜೋಗಿನ್, ಅಕ್ಕಮಹಾದೇವಿ ಮಾದರ, ಅಶ್ವಿನಿ ಗುಡಗೇರಿ, ಮಂಜುಳಾ ಹೊಸಮನಿ ಈ ಮಹಿಳಾ ತಂಡ ಆರ್ಥಿಕ ಸದೃಢರಾಗಿ ಸ್ವಾವಲಂಬನೆ ಜೀವನ ನಡೆಸುತ್ತಿದ್ದಾರೆ. ಇವರಿಗೆ ಸಹಾಯಕರಾಗಿ ನಾಗರತ್ನ ಮಡ್ಡಿ, ಸೋನವ್ವ ಚವ್ಹಾಣ ಕಾರ್ಯನಿರ್ವಹಿಸುತ್ತಿದ್ದಾರೆ.‌

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!