Friday, February 3, 2023

Latest Posts

ವಯಾಕಾಮ್18 ಪಾಲಿಗೆ ಒಲಿದ ಮಹಿಳಾ ಐಪಿಎಲ್ ನೇರ ಪ್ರಸಾರದ ಹಕ್ಕು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮಹಿಳಾ ಐಪಿಎಲ್ ನೇರ ಪ್ರಸಾರದ ಹಕ್ಕಿನ ಮಾರಾಟದ ಹರಾಜಿನಲ್ಲಿ ವಯಾಕಾಮ್18 ಬರೋಬ್ಬರಿ 951 ಕೋಟಿ ರೂ. ನೀಡಿ ಮುಂದಿನ 5 ವರ್ಷಗಳ ಪ್ರಸಾರ ಹಕ್ಕನ್ನು ತನ್ನದಾಗಿಸಿಕೊಂಡಿದೆ.
ಈ ಮೂಲಕ ಐಪಿಎಲ್‍ನ ಪ್ರತಿ ಪಂದ್ಯ 7.09 ಕೋಟಿ ರೂ.ಗೆ ಮಾರಾಟವಾಗಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಮಹಿಳಾ ಐಪಿಎಲ್‍ನ ಪ್ರಸಾರ ಹಕ್ಕನ್ನು ವಯಾಕಾಮ್18 ಪಡೆದುಕೊಂಡಿದೆ. 951 ಕೋಟಿ ರೂ. ನೀಡಿ ಪ್ರಸಾರ ಹಕ್ಕನ್ನು ವಯಾಕಾಮ್18 ಪಡೆದುಕೊಂಡಿದ್ದು, ಪ್ರತಿ ಪಂದ್ಯ 7.09 ಕೋಟಿ ರೂ.ಗೆ ಮಾರಾಟವಾಗಿದೆ.

ಈಗಾಗಲೇ ಮಹಿಳಾ ಐಪಿಎಲ್‍ನ 5 ಫ್ರಾಂಚೈಸ್ ಬಗ್ಗೆ ಜ.25 ರಂದು ಬಿಸಿಸಿಐ ಮಾಹಿತಿ ಹಂಚಿಕೊಳ್ಳಲಿದೆ. ಮಾರ್ಚ್‍ನಲ್ಲಿ ಮಹಿಳಾ ಐಪಿಎಲ್ ಆರಂಭಗೊಳ್ಳುವ ಸಾಧ್ಯತೆ ಇದ್ದು, ಈಗಾಗಲೇ ಆಟಗಾರ್ತಿಯರ ಹರಾಜು ಪ್ರಕ್ರಿಯೆಗೆ ಕೂಡ ಸಿದ್ಧತೆ ನಡೆಯುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!