ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯರ ಪ್ರೀಮಿಯರ್ ಲೀಗ್ನ ಮೊದಲ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್ ತಂಡ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಹರ್ಮನ್ಪ್ರೀತ್ ಕೌರ್ ನೇತೃತ್ವದ ಮುಂಬಯಿ ಇಂಡಿಯನ್ಸ್ ಬಳಗ ಮೊದಲು ಬ್ಯಾಟ್ ಮಾಡಲಿದೆ. ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಪಂದ್ಯ ಆಯೋಜನೆಗೊಂಡಿದೆ .
ಟಾಸ್ ಗೆದ್ದ ಗುಜರಾತ್ ತಂಡದ ನಾಯಕಿ ಬೆತ್ ಮೂನಿ, ಪಿಚ್ನಲ್ಲಿ ಹುಲ್ಲು ಹೆಚ್ಚಾಗಿದೆ. ಡಬ್ಲ್ಯುಪಿಎಲ್ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ಬಡಿಸಲಿದೆ. ನಮ್ಮ ತಂಡ ಮೂರು ವೇಗಿಗಳು ಹಾಗೂ ನಾಲ್ಕು ಸ್ಪಿನ್ನರ್ಗಳನ್ನು ಹೊಂದಿರಲಿದೆ ಎಂದು ಹೇಳಿದರು.
ಮುಂಬಯಿ ಇಂಡಿಯನ್ಸ್ ನಾಯಕಿ ಹರ್ಮನ್ಪ್ರೀತ್ ಕೌರ್ ಮಾತನಾಡಿ, ಇದೊಂದು ವಿಶೇಷ ದಿನ. ಈ ಸಂದರ್ಭದಲ್ಲಿ ಮೈ ರೋಮಾಂಚನವಾಗುತ್ತಿದೆ ಎಂದರು.