Friday, March 24, 2023

Latest Posts

ರಷ್ಯಾದ ಕೋವಿಡ್ ಲಸಿಕೆ ಸ್ಪುಟ್ನಿಕ್ ಅಭಿವೃದ್ಧಿಪಡಿಸಿದ್ದ ವಿಜ್ಞಾನಿಯ ನಿಗೂಢ ಹತ್ಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾದ ಕೋವಿಡ್ (Covid-19) ಲಸಿಕೆ ಸ್ಪುಟ್ನಿಕ್ ವಿ (Sputnik V) ಅಭಿವೃದ್ಧಿಪಡಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ವಿಜ್ಞಾನಿ ಆಂಡ್ರೆ ಬೊಟಿಕೋವ್ ಅವರನ್ನು (Andrey Botikov) ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ.

47 ವರ್ಷ ವಯಸ್ಸಿನ ಬೊಟಿಕೋವ್ ಅವರು ಗಾಮೇಲೆಯಾ ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ಎಕಾಲಜಿ ಆ್ಯಂಡ್ ಮ್ಯಾಥಮೆಟಿಕ್ಸ್​​ನ ಹಿರಿಯ ಸಂಶೋಧಕರಾಗಿದ್ದರು. ಅವರು ಅಪಾರ್ಟ್​​ಮೆಂಟ್​​ನಲ್ಲಿ ಶವವಾಗಿ ಗುರುವಾರ ಪತ್ತೆಯಾಗಿದ್ದರು.
ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ.

ಆಂಡ್ರೆ ಬೊಟಿಕೋವ್ ಕೋವಿಡ್ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಬಹುಮುಖ್ಯ ಪಾತ್ರವಹಿಸಿದ್ದರು. ಅವರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 2021ರಲ್ಲಿ ‘ಆರ್ಡರ್ ಆಫ್​ ಮೆರಿಟ್ ಫಾರ್​ ದಿ ಫಾದರ್​​​ಲ್ಯಾಂಡ್’ ಗೌರವ ನೀಡಿ ಗೌರವಿಸಿದ್ದರು. 2020ರಲ್ಲಿ ರಷ್ಯಾದ 18 ವಿಜ್ಞಾನಿಗಳ ತಂಡ ಸ್ಪುಟ್ನಿಕ್ ವಿ ಲಸಿಕೆ ಅಭಿವೃದ್ಧಿಪಡಿಸಿತ್ತು. ಈ ತಂಡದಲ್ಲಿ ಬೊಟಿಕೋವ್ ಪ್ರಮುಖ ಪಾತ್ರ ವಹಿಸಿದ್ದರು.

ಬೊಟಿಕೋವ್ ಅವರ ಸಾವನ್ನು ಕೊಲೆ ಎಂದೇ ಪರಿಗಣಿಸಲಾಗಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ರಷ್ಯಾ ತಿಳಿಸಿದೆ.
ಬಂಧಿತ ಯುವಕ ತಪ್ಪೊಪ್ಪಿಕೊಂಡಿದ್ದು, ದೋಷಾರೋಪ ಹೊರಿಸಲಾಗಿದೆ. ಆರೋಪಿಯು ಅಪರಾಧ ಹಿನ್ನೆಲೆಯುಳ್ಳವನಾಗಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!