ಮಧ್ಯಪ್ರಾಚ್ಯ ದೇಶಗಳಲ್ಲಿ ಸಂಪ್ರದಾಯವಾದಿಗಳ ವಿರೋಧ ಮೀರಿ ಗೆಲ್ಲುತ್ತಿದೆ ಮಹಿಳೆಯರ ಕ್ರೀಡಾ ಪ್ರೀತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಪುರುಷ ತಂಡಗಳಷ್ಟೇ ಸಮಾನ ಪ್ರಾತಿನಿಧ್ಯ ಸಿಗುತ್ತಿದೆ. ಅದರಲ್ಲೂ ಫುಟ್ಬಾಲ್ ಆಟದಲ್ಲಿ ಪುರುಷರ ತಂಡಗಳಷ್ಟೇ ಮಹಿಳಾ ತಂಡಗಳಿಗೂ ಹೆಚ್ಚಿನ ಅವಕಾಶ, ಅಭಿಮಾನಿ ಬಳಗವಿದೆ. ಆದರೆ ದುರಾದೃಷ್ಟ ವಿಚಾರವೆಂದರೆ, ಮಧ್ಯಪ್ರಾಚ್ಯ ದೇಶಗಳಲ್ಲಿ ಮಾತ್ರ ಈ ವಿಚಾರದಲ್ಲಿ ನಾಕಾರಾತ್ಮಕತೆಯಿದೆ. ಅಲ್ಲಿ ಕ್ರೀಡೆಯಲ್ಲಿ ಭಾಗಿಯಾಗಬೇಕೆನ್ನುವ ಹೆಣ್ಣುಮಕ್ಕಳ ಕನಸಿಗೆ ತಣ್ಣೀರೆರಚಲಾಗುತ್ತಿದೆ. ಈ ಆಟ ಕೇವಲ ಗಂಡುಮಕ್ಕಳಿಗೆ ಮಾತ್ರ ಸೀಮಿತ ಎನ್ನುವ ಅಲ್ಲಿನ ಸಂಪ್ರದಾಯವಾದಿ ನಾಯಕರು, ಹೆಣ್ಣುಮಕ್ಕಳು ಈ ಆಟಕ್ಕೆ ಅರ್ಹರಲ್ಲ ಎಂದು ಭಾವಿಸುತ್ತಾರೆ.

ಹಾಗಾಗಿಯೇ ಇದುವರೆಗೂ ಸಾಕರ್‌ ಕ್ರೀಡೆಯಲ್ಲಿ ಗಂಡುಮಕ್ಕಳಿಗೆ ಸಿಕ್ಕ ಪ್ರಾಶಸ್ತ್ಯ ಹೆಣ್ಣುಮಕ್ಕಳಿಗೆ ಸಿಕ್ಕಿಲ್ಲ. ಎಲ್ಲರ ವಿರೋಧದ ನಡುವೆಯೂ ಅಲ್ಲಿನ ಕೆಲ ಕ್ರೀಡಾಕಾರಿಣಿಯರು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಮುಂದೆ ಬಂದಿದ್ದಾರೆ. ಜೊತೆಗೆ ಅಲ್ಲಿನ ಮಹಿಳಾ ಆಯೋಗ ಕೂಡಾ ಹೆಣ್ಣುಮಕ್ಕಳ ಪರವಾಗಿ ನಿಂತಿದ್ದು, ಈ ಗೇಮ್‌ನಲ್ಲಿ ಅವರಿಗೂ ಸಮಾನವಾದ ಸ್ಥಾನಮಾನ ಸಿಗಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಕತಾರ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ನಡೆಯುತ್ತಿದ್ದು, ಆನಂತರವಾದರೂ ಅಲ್ಲಿನ ಪರಿಸ್ಥಿತಿಗಳು ಸುಧಾರಣೆ ಕಾಣಬಹುದು ಎಂಬ ಆಶಾಭಾವನೆಯಲ್ಲಿ ಮಹಿಳಾ ಆಟಗಾರ್ತಿಯರಿದ್ದಾರೆ.

ಆದರೆ, ಇದರ ವಿರುದ್ಧ ಅಲ್ಲಿನ ಸಂಪ್ರದಾಯವಾದಿಗಳಿದ್ದಾರೆ. ಇದು ಕೇವಲ ಪುರುಷಗರಿಷ್ಟೇ ಇರುವ ಆಟವೆಂದು ಭಾವಿಸಿದ್ದಾರೆ. ಅಲ್ಲದೆ ಮಹಿಳೆಯರ ಆಟಗಳಿಗೆ ಅನುಕೂಲಕರವಾದ ಹಣಕಾಸಿನ ನೆರವಿನ ಕೊರತೆ ಇದೆ. ಇಂತಹ ವಿರೋಧಗಳಿರುವುದರಿಂದ ಅಲ್ಲಿನ ಹೆಣ್ಣುಮಕ್ಕಳಿಗೆ ಯಾವುದೇ ರೀತಿಯ ತರಬೇತಿ ನೀಡಿಲ್ಲ. ಆಟದಲ್ಲಿ ಹೆಣ್ಣುಮಕ್ಕಳು ಧರಿಸುವ ಬಟ್ಟೆಗಳ ವಿರುದ್ಧವೂ ಅಲ್ಲಿನ ಸಂಪ್ರದಾಯವಾದಿಗಳು ಧ್ವನಿಯೆತ್ತಿದ್ದಾರೆ.

ಇವೆಲ್ಲವುಗಳನ್ನು ಮೀರಿ ಅಲ್ಲಿನ ಹೆಣ್ಣುಮಕ್ಕಳು ಈ ಗೇಮ್‌ನಲ್ಲಿ ವಿಜಯ ಸಾಧಿಸಲು ಪಣ ತೊಟ್ಟಿದ್ದಾರೆ ಅದರಲ್ಲಿ ʻಸಾರಾ ಅಸ್ರಿಮಿನ್‌ʼ ಕೂಡಾ ಒಬ್ಬರು. ಇವರ ಸಂಬಂಧಿಕರಿಂದಲೇ ತಿರಸ್ಕೃತ ಮಾತುಗಳನ್ನು ಕೇಳಿದ್ದರಂತೆ. ʻನೀನೊಬ್ಬ ಹೆಣ್ಣುಮಗಳು, ಇದೆಲ್ಲಾ ನೀನು ಆಡುವಂಥದ್ದಲ್ಲʼ ಎಂಬ ನಿರ್ಲಕ್ಷ್ಯದ ಮಾತುಗಳನ್ನು ಕೇಳಿದ್ದಾರೆ. ಎಲ್ಲದ್ಕಕೂ ತೆರೆ ಎಳೆದ ನಾರಿಮಣಿಯರು ಇತ್ತೀಚೆಗೆ ಸಾಕರ್‌ ಮೈದಾನದಲ್ಲಿ ಜೋರ್ಡಾನ್‌ ತಂಡದ ಸಾರಾ ಇತರೆ ಹೆಣ್ಣುಮಕ್ಕಳು ಕ್ರೀಡಾಭ್ಯಾಸದಲ್ಲಿ ತೊಡಗಿದ್ದರು.

ಈ ಕುರಿತು ಮಾತನಾಡಿದ ಸಾರಾ ಅಸ್ರಿಮಿನ್‌, ಈ ಆಟವನ್ನು ನಾನು ಪ್ರೀತಿಸುತ್ತಿದ್ದೇನೆ, ಏಕೆಂದರೆ ಇದರಲ್ಲಿ ಆಕ್ಷನ್‌ ಇದೆ. ಇತರೆ ಕ್ರೀಡೆಗಳಿಗಿಂತ ಈ ಕ್ರೀಡೆ ನನಗೆ ಬಹಳ ಅಚ್ಚುಮೆಚ್ಚು ನನಗಷ್ಟೇ ಅಲ್ಲ ನನ್ನ ಸಹೋದರಿಗೂ ಈ ಕ್ರೀಡೆಯೆಂದರೆ ಬಹಳ ಇಷ್ಟ ಎಂದರು. ಇನ್ನೊಂದು ವಿಚಾರ ಅಂದರೆ, ಇವರ ತಂದೆ ಒಂದು ಖಾಸಗಿ ಅಕಾಡೆಮಿಯಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸದಾಗಿ ಪ್ರಾರಂಭಿಸಲಾದ ಪಂದ್ಯಾವಳಿಗಳು ಮಹಿಳಾ ತಂಡಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಮತ್ತು ಹೆಚ್ಚಿನ ತಂಡಗಳ ರಚನೆಗೆ ಉತ್ತೇಜನ ನೀಡಲು ಅವಕಾಶಗಳನ್ನು ಒದಗಿಸುತ್ತವೆ ಎನ್ನಲಾಗಿದೆ.

ಅಮ್ಮಾನ್ಸ್ ಆರ್ಥೊಡಾಕ್ಸ್ ಕ್ಲಬ್‌ನಲ್ಲಿ ಮಹಿಳಾ ತಂಡದಲ್ಲಿರುವ 20 ವರ್ಷದ ಮಸಾರ್ ಅಥಮ್ನೆಹ್, ತಾನು 12 ಅಥವಾ 13 ವರ್ಷ ವಯಸ್ಸಿನಿಂದಲೂ ಸಾಕರ್ ಆಡುತ್ತಿರುವುದಾಗಿ ತಿಳಿಸಿದರು. ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೊ ಸ್ವಯಂಕೃಷಿಯಲ್ಲಿ ಮೇಲೆ ಬಂದ ಅವರು ನನಗೆ ಆದರ್ಶಪ್ರಾಯ ಎಂದರು. ಒಂದಲ್ಲಾ ಒಂದು ದಿನ ಜೋರ್ಡಾನ್ ರಾಷ್ಟ್ರೀಯ ತಂಡದಲ್ಲಿ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದರು.

ಹಲವಾರು ಬಾರಿ ಸಾಕಷ್ಟು ಕಷ್ಟಗಳನ್ನು ನೋಡಿದ್ದೇವೆ, ಇದು ಗಂಡುಮಕ್ಕಳಿಗೆ ಮಾತ್ರ ಇರುವ ಆಟ, ನೀವಿ ಟೀ-ಶರ್ಟ್‌, ಶಾರ್ಟ್ಸ್‌ ನಂತಹ ಬಟ್ಟೆಗಳನ್ನು ಯಾಕೆ ಧರಿಸುತ್ತೀರಾ? ಇಂತಹ ದೊಡ್ಡಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ತಿಳಿಸಿದರು. ಇದರ ನಡುವೆ ಜೋರ್ಡಾನ್ ಫುಟ್ಬಾಲ್ ಅಸೋಸಿಯೇಷನ್ ​​​​ಮಹಿಳೆಯರ ತಂಡಗಳನ್ನು ಕಣಕ್ಕಿಳಿಸಲು ಕ್ಲಬ್‌ಗಳಿಗೆ ಹಣಕಾಸಿನ ನೆರವು ನೀಡುತ್ತಿದೆ.
ಗಾಜಾದ ಕೆಲವು ಮಹಿಳಾ ಕ್ರೀಡಾ ತಂಡಗಳ ಬೀಟ್ ಹನೌನ್ ಅಲ್-ಅಹ್ಲಿ ಯೂತ್ ಕ್ಲಬ್‌ನ 20 ಹೆಣ್ಣುಮಕ್ಕಳು ಸಾಕರ್ ಮತ್ತು ಬ್ಯಾಸ್ಕೆಟ್‌ಬಾಲ್ ಆಡುತ್ತಿದ್ದಾರೆ. ಅವರು ಶಾರ್ಟ್ಸ್ ಬದಲಿಗೆ ಪ್ಯಾಂಟ್ ಮತ್ತು ಉದ್ದ ತೋಳಿನ ಶರ್ಟ್ ಧರಿಸುತ್ತಾರೆ. ಅವರಿಗೆ 17 ವರ್ಷ ತುಂಬಿದ ಬಳಿಕ ಆಟಕ್ಕೆ ಬ್ರೇಕ್‌ ಹಾಕಿ ಹಸೆಮಣೆ ಏರುತ್ತಾರೆಂದು ತಂಡದ ಮ್ಯಾನೇಜರ್ ಮಹಾ ಶಬತ್ ಹೇಳಿದ್ದಾರೆ. ಗಾಜಾ ಸ್ಟ್ರಿಪ್‌ನಲ್ಲಿ ಮಹಿಳಾ ಕ್ರೀಡೆಗಳಿಗೆ ಯಾವುದೇ ಬೆಂಬಲವಿಲ್ಲ. ಪ್ರಪಂಚದ ಇತರ ಭಾಗಗಳಲ್ಲಿ ಹೆಣ್ಣುಮಕ್ಕಳಿಗೆ ನೀಡುವ ಕನಿಷ್ಟ ಸಹಕಾರವೂ ನಮಗೆ ಸಿಗುತ್ತಿಲ್ಲ ಎಂದು ನೊಂದುಕೊಳ್ಳುತ್ತಾರೆ ಶಬತ್.

ಈ ಎಲ್ಲದಕ್ಕಿಂತ ಆಫ್ಗನ್‌ ತಾಲೀಬಾನಿಗಳ ಕೈಗೆ ಸಿಕ್ಕ ಬಳಿಕ ಮತ್ತಷ್ಟು ಮಹಿಳಾ ಕ್ರೀಡೆಗಳಿಗೆ ಮತ್ತಷ್ಟು ಹಿನ್ನೆಡೆಯುಂಟಾಗಿದೆ. ಒಂದು ವರ್ಷದ ಹಿಂದೆ ಅಧಿಕಾರ ಹಿಡಿದ ತಾಲಿಬಾನ್‌ಗಳು ಹೊಸದಾಗಿ ಕ್ರೀಡೆಯಲ್ಲಿ ಸಾಧಿಸಬೇಕೆನ್ನುವ ಮಹಿಳೆಯರ ಕನಸನ್ನು ಚಿವುಟಿಹಾಕಿದೆ. ನೂರಾರು ಮಹಿಳಾ ಕ್ರೀಡಾಪಟುಗಳು ದೇಶ ಬಿಟ್ಟು ಓಡಿಹೋದರು. ಆಸ್ಟ್ರೇಲಿಯಾ ಮಹಿಳಾ ರಾಷ್ಟ್ರೀಯ ತಂಡ ಅಲ್ಲಿಂದ ಜಾಗ ಖಾಲಿ ಮಾಡಿಸಿದ್ದಲದೆ ಯುವ ಅಭಿವೃದ್ಧಿ ತಂಡದ ಸದಸ್ಯರನ್ನು ಬ್ರಿಟನ್‌ಗೆ ಕಳಿಸಿಬಿಟ್ಟರು. ಮಹಿಳೆಯರ ಕ್ರೀಡೆಗಳು ಮತ್ತು  ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ತಾಲಿಬಾನ್ ನಿಷೇಧಿಸಿದೆ. ಮತ್ತು ಮಹಿಳೆಯರು ಸಾರ್ವಜನಿಕವಾಗಿ ನಡೆಯಲು ನಿರ್ಬಂಧಗಳಿಂದ ಅಲ್ಲಿನ ಹೆಣ್ಣುಮಕ್ಕಳ ಜೀವನ ಉಸಿರುಗಟ್ಟಿದೆ.

ಮಹಿಳಾ ರಾಷ್ಟ್ರೀಯ ತಂಡದ ಮಾಜಿ ನಾಯಕಿ ಖಾಲಿದ್ ಪೋಪಾಲ್ ಈಗ ಡೆನ್ಮಾರ್ಕ್‌ನಲ್ಲಿದ್ದು, ಕ್ರೀಡೆಯನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ. ಇನ್ನೂ ಅಫ್ಘಾನಿಸ್ತಾನದಲ್ಲಿರುವ 15 ವರ್ಷದೊಳಗಿನವರ ತಂಡದ ಸದಸ್ಯರನ್ನು ಹೊರತರಲು ಅವರು ಕೆಲಸ ಮಾಡುತ್ತಿದ್ದಾರೆ. ಸ್ವತಂತ್ರವಾಗಿರಲು ಬಯಸುವ ಮಹಿಳೆಯರು, ಯುವತಿಯರ ಬಗ್ಗೆ ನಾನು ತುಂಬಾ ಕಾಳಜಿ ವಹಿಸುತ್ತೇನೆ. ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತೆ ಕ್ರೀಡೆಗಳನ್ನು ಆಡುತ್ತಾರೆ ಅಂತ ನನಗನಿಸುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!