ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಎರಡನೇ ಗೆಲುವು ಸಾಧಿಸಿದೆ.
ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ರಿಚಾ ಘೋಷ್ ಅವರ ಪ್ರಸಂಗವಧಾನಿತ ಬ್ಯಾಟಿಂಗ್ ನೆರವಿನಿಂದ ಭಾರತವು ವೆಸ್ಟ್ ಇಂಡೀಸ್ ಅನ್ನು ಸೋಲಿಸಿ ತನ್ನ ಎರಡನೆ ಜಯ ದಾಖಲಿಸಿತು. ಗೆಲ್ಲಲು ಬೇಕಾದ 119 ರನ್ ಗಳ ಗುರಿಯನ್ನು ಕೇವಲ 4 ವಿಕೆಟ್ ಕಳಕೊಂಡು ಸಾಧಿಸಿತು.
ಸ್ಮ್ರತಿ ಮಂಧಾನ ಮತ್ತು ಶೆಫಾಲಿ ವರ್ಮ ಮೂರು ಓವರುಗಳಲ್ಲೆ 32 ರನ್ ಸೇರಿಸಿದರು. ಆದರೆ ವೆಸ್ಟ್ ಇಂಡೀಸ್ ಸ್ಪಿನ್ ದಾಳಿ ಆರಂಭಿಸುವುದರೊಂದಿಗೆ ಭಾರತದ ಮೂರು ವಿಕೆಟ್ ಗಳು ಬೇಗನೆ ಉರುಳಿದವು. ಮಂಧಾನ ಹತ್ತು ರನ್ ಗಳಿಸಿ ಔಟಾದರೆ , ಪಾಕಿಸ್ಥಾನದ ವಿರುದ್ಧ ಜಯ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೆಮಿಮಾ ರಾಡ್ರಿಗಸ್ ಗಳಿಸಲಾದುದು ಕೇವಲ ಒಂದು ರನ್ . ಶೆಫಾಲಿ 28 ರನ್ ಗಳಿಸಿ ಔಟಾದರು.
ಬಳಿಕ ಹರ್ಮನ್ ಮತ್ತು ರಿಚಾ ಘೋಷ್ ಯಾವುದೇ ವಿಕೆಟ್ ಕಳಕೊಳ್ಳದೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಹರ್ಮನ್ ಪ್ರೀತ್ 33 ರನ್ ಗಳಿಸಿ ವಿಜಯದ ಹೊಸ್ತಿಲಲ್ಲಿ ಔಟಾದರು. ರಿಚಾ ಘೋಷ್ 44 ರನ್ ಗಳೊಂದಿಗೆ ಔಟಾಗದೆ ಉಳಿದರು.
ವೆಸ್ಟಿಂಡೀಸ್ 6 ವಿಕೆಟಿಗೆ 118 (ಸ್ಟಫಾನಿ ಟೇಲರ್ 42, ಶೆಮೇನ್ ಕ್ಯಾಂಪ್ ಬೆಲ್ 30, ಚೇಡಿಯನ್ 21. ದೀಪ್ತಿ ಶರ್ಮಾ 15ಕ್ಕೆ 3 ವಿಕೆಟ್, ರೇಣುಕಾ 22 ಕ್ಕೆ 1 , ಪೂಜಾ 21 ಕ್ಕೆ 1)
ಭಾರತ 4 ವಿಕೆಟಿಗೆ 119 ( ಸ್ಮೃತಿ ಮಂಧಾನ 10, ಶೆಫಾಲಿ ವರ್ಮಾ 28, ಜೆಮಿಮಾ 1, ಹರ್ಮನ್ ಪ್ರೀತ್ 33 , ರಿಚಾ ಘೋಷ್ 44)