ಬ್ಯಾಗಿನಲ್ಲಿ ಬಾಚಣಿಗೆ ಬದಲು ಚಾಕು ಇಡಿ: ಹಿಂದು ಹೆಣ್ಣು ಮಕ್ಕಳಿಗೆ ಸಾಧ್ವಿ ಪ್ರಾಚಿ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದು ಹೆಣ್ಣು ಮಕ್ಕಳು ತಮ್ಮ ಬ್ಯಾಗ್ ಗಳಲ್ಲಿ ಬಾಚಣಿಗೆ, ಲಿಪ್ಸ್ಟಿಕ್ ಬದಲಾಗಿ ಚಾಕು ಇಟ್ಟುಕೊಳ್ಳಬೇಕು ಎಂದು ಸಾಧ್ವಿ ಪ್ರಾಚಿ (Sadhvi Prachi) ಹೇಳಿದ್ದಾರೆ.

ಮಧ್ಯಪ್ರದೇಶದ ರತ್ಲಂ ಪ್ರವಾಸದಲ್ಲಿರುವ ವಿಶ್ವ ಹಿಂದೂ ಪರಿಷತ್ ನಾಯಕಿ ಪ್ರಾಚಿ, ಹಿಂದು ಹೆಣ್ಣು ಮಕ್ಕಳು ಸಾಂಪ್ರದಾಯಿಕವಾಗಿ ಬದುಕಬೇಕು. ಮುಸ್ಲಿಮರು ಅವರ ಧರ್ಮದ ಆಚಾರ ವಿಚಾರ ಪಾಲಿಸುವಂತೆ ಹಿಂದು ಧರ್ಮದ ಹೆಣ್ಣು ಮಕ್ಕಳೂ ಕೂಡ ನಮ್ಮ ಧರ್ಮದ ಆಚಾರ ವಿಚಾರ ಪಾಲಿಸಬೇಕುಎಂದು ಹೇಳಿದ್ದಾರೆ.

ಜಿಹಾದಿಗಳು ಹತ್ತಿರ ಬಂದರೆ ಚಾಕು ಬಳಸಿ ತಮ್ಮನ್ನು ರಕ್ಷಿಸಿಕೊಳ್ಳಬೇಕು ಎಂದಿದ್ದಾರೆ. ಇದೀಗ ಈ ರೀತಿಯ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!