ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್: ಫೈನಲ್ ಲಗ್ಗೆ ಇಟ್ಟ ಲೊವ್ಲಿನಾ, ಸವೀಟಿ , ನಿಖತ್, ನೀತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿಯಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಾಕ್ಸರ್‌ಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. 75 ಕೆಜಿ ವಿಭಾಗದ ಸೆಮಿಫೈನಲ್ ನಲ್ಲಿ ಲೊವ್ಲಿನಾ ಬೊರ್ಗೊಹೈನ್ ಚೀನಾದ ಲಿಕಿಯಾನ್ ಅವರನ್ನು ಸೋಲಿಸಿ ಫೈನಲ್ ನಲ್ಲಿ ಸ್ಥಾನ ಪಡೆದರೆ , ಸವೀಟಿ ಬೂರಾ ಆಸ್ಟ್ರೇಲಿಯಾದ ಎಮ್ಮಾ-ಸ್ಯೂ ಗ್ರೀನ್ಟ್ರೀ ವಿರುದ್ಧ 81 ಕೆಜಿ ವಿಭಾಗದ ಫೈನಲ್ ನಲ್ಲಿ ಸ್ಥಾನ ಪಡೆದರು.

ಲೊವ್ಲಿನಾ ತನ್ನ ಚೀನಾದ ಎದುರಾಳಿ ಲಿ ಕಿಯಾನ್ ವಿರುದ್ಧ 4-1 ಅಂತರದಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಸವೀಟಿ ತನ್ನ ಆಸ್ಟ್ರೇಲಿಯಾದ ಎದುರಾಳಿಯನ್ನು ಸೋಲಿಸಿದರು.

50 ಕೆಜಿ ಮತ್ತು 48 ಕೆಜಿ ವಿಭಾಗದಲ್ಲಿ ನಿಖತ್ ಜರೀನ್ ಮತ್ತು ನೀತು ಘಂಗಾಸ್ ಈಗಾಗಲೇ ಚಿನ್ನದ ಪದಕದ ಸ್ಪರ್ಧೆಯಲ್ಲಿ ಸ್ಥಾನ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!