ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಬಂದಿದೆ.45-48 ಕೆಜಿ ವಿಭಾಗದಲ್ಲಿ ನೀತು ಗಂಗಾಸ್ ಚಿನ್ನದ ಪದಕ ಗೆದ್ದರು. ಇದೀಗ ಸ್ವೀಟಿ ಬೂರಾ 75-81 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಹರಿಯಾಣ ಮೂಲದ ಸ್ವೀಟಿ ಬೂರಾ ಅವರು ಚೀನಾದ ಲಿನಾ ವಾಂಗ್ ಅವರನ್ನ 81 ಕೆಜಿ ವಿಭಾಗದ ಫೈನಲ್’ನಲ್ಲಿ ಸೋಲಿಸಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಇನ್ನು ಇವರಿಬ್ಬರನ್ನು ಹೊರತುಪಡಿಸಿ, ನಿಖತ್ ಜರೀನ್ ಮತ್ತು ಲೊವ್ಲಿನಾ ಬೊರ್ಗೊಹೈನ್ ಕೂಡ ಫೈನಲ್‌ಗೆ ಪ್ರವೇಶಿಸಿದ್ದು, ಪದಕ ಖಚಿತಪಡಿಸಿದ್ದಾರೆ.