Earth Hour ಗೆ ಭರ್ಜರಿ ರೆಸ್ಪಾನ್ಸ್: ರಾಷ್ಟ್ರಪತಿ ಭವನ, ಕಚೇರಿ, ದೇಗುಲಗಳಲ್ಲಿ ಲೈಟ್ ಆಫ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :

ಮಾರ್ಚ್ ಕೊನೆಯ ಶನಿವಾರವಾದ ಇಂದು ವಿಶ್ವದಲ್ಲಿ ವಿಶೇಷ ವಾರ್ಷಿಕ ಜಾಗತಿಕ ಕಾರ್ಯಕ್ರಮ ‘ಅರ್ಥ್ ಅವರ್’ (Earth Hour) ಅನ್ನು ಜನರು ಆಚರಿಸಿಕೊಂಡಿದ್ದಾರೆ.


ಭಾರತ ಸಹಿತ ಸುಮಾರು 190 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಿಂದ ಲಕ್ಷಾಂತರ ಜನರು ರಾತ್ರಿ 8.30ರಿಂದ 9:30 ರವರೆಗೆ ಒಂದು ಗಂಟೆಗಾಲ ಕಾಲ ಎಲ್ಲಾ ದೀಪಗಳನ್ನು ಆಫ್ ಮಾಡುವ ಮೂಲಕ ಈ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

ಭಾರತದಲ್ಲೂ ಉತ್ತಮ ಬೆಂಬಲ ಸಿಕ್ಕಿದ್ದು, ದೆಹಲಿಯ ರಾಷ್ಟ್ರಪತಿ ಭವನ ಮತ್ತು ಅಕ್ಷರಧಾಮ ದೇವಸ್ಥಾನ, ಕೋಲ್ಕತ್ತಾದ ಹೌರಾ ಸೇತುವೆ, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ ಮೊದಲ ಕಡೆ ರಾತ್ರಿ 8:30 ರಿಂದ 9:30 ರವರೆಗೆ ಒಂದು ಗಂಟೆ ಕಾಲ ದೀಪಗಳನ್ನು ಆಫ್ ಮಾಡಿ ಬೆಂಬಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!