ಏಕಕಾಲದಲ್ಲಿ ಎರಡು ಕಡೆ ಕೆಲಸ: ತನ್ನ ಉದ್ಯೋಗಿಗಳಿಗೆ ಖಡಕ್ ನೋ ಎಂದ ಇನ್ಫೋಸಿಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಏಕಕಾಲದಲ್ಲಿ ಎರಡೆರಡು ಕೆಲಸ ಮಾಡುವ ಉದ್ಯೋಗಿಗಳಿಗೆ ಇನ್ಫೋಸಿಸ್ ಸಂಸ್ಥೆ ಖಡಕ್ ಎಚ್ಚರಿಕೆ ನೀಡಿದ್ದು, ಉದ್ಯೋಗಿಗಳು ಬೇರೆ ಕಂಪನಿಗಳಿಗೆ ಕೆಲಸ ಮಾಡುವಂತಿಲ್ಲ ಎಂದು ಎಚ್ಚರಿಸಿದೆ.

ಈ ಕುರಿತು ಇನ್ಫೋಸಿಸ್ ಮಾನವ ಸಂಪನ್ಮೂಲ ವಿಭಾಗವು ಉದ್ಯೋಗಿಗಳಿಗೆ ಇಮೇಲ್ ಕಳುಹಿಸಿದ್ದು, ಎರಡೆರಡು ಕಡೆ ಉದ್ಯೋಗ ಮಾಡುವ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗುವುದು ಎಂದು ತಿಳಿಸಿದೆ.

ಮೂನ್‌ಲೈಟಿಂಗ್ ಅಥವಾ ಒಂದೇ ಬಾರಿ ಎರಡೆರಡು ಕಡೆ ಕೆಲಸ ಮಾಡುವುದು ಕಂಪನಿಯು ಉದ್ಯೋಗಿಗಳಿಗೆ ತಿಳಿಸಿದ ಕೋಡ್ ಆಫ್ ಕಂಡಕ್ಟ್‌ಗೆ ವಿರುದ್ಧವಾಗಿದೆ. ಇಂತಹ ಉದ್ಯೋಗಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಕೆಲಸದಿಂದ ವಜಾ ಮಾಡಲಾಗುವುದು ಎಂದು ಸಂಸ್ಥೆ ಎಚ್ಚರಿಸಿದೆ. ಈ ಹಿಂದೆಯೇ ಈ ಕುರಿತು ವಿಪ್ರೊ ಕಂಪನಿಯು ತನ್ನ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!