October 9, 2026
Friday, October 9, 2026
spot_img

ಕೆಲಸದ ಒತ್ತಡ, ಸಿಬ್ಬಂದಿ ಕಿರುಕುಳ: ತುಂಗಾ ಕಾಲುವೆಗೆ ಹಾರಿ ಆತ್ಮಹ*ತ್ಯೆ ಮಾಡಿಕೊಂಡ ಬ್ಯಾಂಕ್ ನೌಕರ

ಹೊಸದಿಗಂತ ವರದಿ ದಾವಣಗೆರೆ:

ಕೆಲಸದ ಒತ್ತಡ ಹಾಗೂ ಸಿಬ್ಬಂದಿ ಕಿರುಕುಳದಿಂದ ಬ್ಯಾಂಕ್ ನೌಕರರೊಬ್ಬರು ತುಂಗಾ ಮೇಲ್ದಂಡೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಹೊನ್ನಾಳಿ ತಾಲೂಕಿನಲ್ಲಿ ವರದಿಯಾಗಿದೆ.

ಮಾದನಬಾವಿ ಗ್ರಾಮದ ಆರ್.ಡಿ. ಮೋಹನ್ ಕುಮಾರ್(37) ಆತ್ಮಹತ್ಯೆಗೆ ಶರಣಾದ ಬ್ಯಾಂಕ್ ನೌಕರ. ಐ.ಡಿ.ಎಫ್.ಸಿ ಬ್ಯಾಂಕ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರಿಗೆ ಒಂದು ಹೆಣ್ಣು ಮಗು ಹಾಗೂ ಅಂಗವೈಕಲ್ಯದಿಂದ ಬಳಲುತ್ತಿರುವ ಒಂದು ಒಂದು ಗಂಡು ಮಗು ಇದೆ. ತಮ್ಮ ಸಾವಿಗೆ ಬ್ಯಾಂಕ್‌ನ ಕೆಲಸದ ಒತ್ತಡ ಹಾಗೂ ಸಿಬ್ಬಂದಿಯೇ ಕಾರಣ ಎಂಬ ನೋವಿನ ಹೇಳಿಕೆಯನ್ನು ವಿಡಿಯೋದಲ್ಲಿ ದಾಖಲಿಸಿದ್ದಾರೆ ಎನ್ನಲಾಗಿದೆ. ಮೃತದೇಹ ಪತ್ತೆಗೆ ಅಧಿಕಾರಿಗಳು ಹಾಗೂ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಇದನ್ನೂ ಓದಿ:

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ, ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ. ಘಟನೆಯ ಕುರಿತು ಶೀಘ್ರವೇ ಸಮಗ್ರ ತನಿಖೆ ನಡೆಸಿ, ಸತ್ಯಾಸತ್ಯತೆ ಅರಿಯಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

Must Read