ಹೊಸದಿಗಂತ ವರದಿ ವಿಜಯಪುರ:
ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ರೌಡಿ ನಿಗ್ರಹ ದಳ ರಚಿಸಿದ್ದು, ಭಾನುವಾರ ಬೆಳಗ್ಗೆ 4 ಗಂಟೆಯಿಂದ 8 ಗಂಟೆ ವರೆಗೆ ಈ ರೌಡಿ ನಿಗ್ರಹ ದಳ ಜಿಲ್ಲೆಯ 25 ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದರು.
ಒಟ್ಟು 482 ರೌಡಿಗಳಿದ್ದು, ಈ ವೇಳೆ ವಿವರಣೆ ನೀಡಲಾಗದಂತಹ ಹಾಗೂ ಅಗತ್ಯ ದಾಖಲಾತಿಗಳು ಇಲ್ಲದೇ ಬಳಸುತ್ತಿರುವ ದ್ವಿಚಕ್ರ ಹಾಗೂ ನಾಲ್ಕು ಚಕ್ರವಾಹನಗಳು ಕಂಡು ಬಂದ ರೌಡಿಶೀಟರ್ ಸಂಖ್ಯೆ 12, ಸಂಬಂಧಪಡದ ಇತರೆ ವ್ಯಕ್ತಿಗಳ ಆಸ್ತಿ ದಾಖಲಾತಿಗಳು, ಚೆಕ್‌ಬುಕ್, ಇತರೆ ದಾಖಲಾತಿಗಳು ದೊರೆತ ರೌಡಿದಾರರ ಸಂಖ್ಯೆ 6, ಬಾಕಿ ಇರುವ ಎನ್‌ಬಿಡಬ್ಲ್ಯೂಎಸ್ ರೌಡಿಗಳ ಸಂಖ್ಯೆ 2, ಬಾಂಡ್ ಓವರ್ ಉಲ್ಲಂಘಿಸಿದ ರೌಡಿಗಳ ಸಂಖ್ಯೆ 13, ರೌಡಿಶೀಟ್‌ರ್ ಆಸ್ತಿ ಮುಟ್ಟುಗೋಲು ಕೈಗೊಂಡ ರೌಡಿಗಳ ಸಂಖ್ಯೆ 7 ಇದ್ದು, ರೌಡಿಶೀಟರ್‌ಗಳ ಮನೆಗೆ ತೆರಳಿದ ರೌಡಿ ನಿಗ್ರಹ ದಳ ತಂಡದ ವೇಳೆ, ಅನಧಿಕೃತ ವಸ್ತು, ದಾಖಲೆ ಇಲ್ಲದ ವಾಹನಗಳ ಬಗ್ಗೆ ನಿಯಮಾನುಸಾರವಾಗಿ ಮುಂದಿನ ಕಾನೂನು ಪ್ರಕ್ರಿಯೆ ಕೈಕೊಳ್ಳಲಾಗುವುದು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



