Sunday, December 3, 2023

Latest Posts

ಪ್ರಧಾನಿ ಮೋದಿ ಭಾಷಣ ವೇಳೆ ಲೈಟ್ ಟವರ್ ಏರಿದ ಯುವತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತೆಲಂಗಾಣದ ಸಿಕಂದರಬಾದ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರದ ವೇಳೆಯಲ್ಲಿ ಹೈಡ್ರಾಮವೊಂದು ನಡೆಯಿತು.
ಪ್ರಧಾನಿ ಗಮನ ಸೆಳೆಯಲು ಯುವತಿಯೊಬ್ಬಳು ಲೈಟ್ ಟವರ್ ಏರಿದರು. ಇದು ನೆರೆದಿದ್ದ ಜನರಲ್ಲಿ ಒಂದು ಕ್ಷಣ ಭೀತಿಯನ್ನು ಸೃಷ್ಟಿಸಿತು.

ತನಗೆ ಪ್ರಧಾನಿ ಜೊತೆಗೆ ಮಾತನಾಡಬೇಕೆಂದು ಯುವತಿ ಮೈದಾನದಲ್ಲಿ ಹಾಕಲಾಗಿದ್ದ ಲೈಟ್ ಟವರ್ ಮೇಲೆ ಹತ್ತಿದ್ದಾಳೆ. ತಕ್ಷಣ ಇದನ್ನು ಗಮನಿಸಿದ ಪ್ರಧಾನಿ ಮೋದಿ, ಯುವತಿಯ ಜೀವಕ್ಕೆ ಅಪಾಯವಾಗಬಹುದು ಎಂದು ಹೇಳಿ ಕೆಳಗೆ ಇಳಿಯುವಂತೆ ವಿನಂತಿಸಿದರು.

ಇದು ಸರಿಯಲ್ಲ, ನಾವು ನಿಮ್ಮೊಂದಿಗಿದ್ದೇವೆ. ದಯವಿಟ್ಟು ಕೆಳಗೆ ಇಳಿಯಿರಿ, ನಾನು ನಿನ್ನ ಮಾತನ್ನು ಕೇಳುತ್ತೇನೆ. ಅದು ಶಾರ್ಟ್ ಸರ್ಕಿಟ್ ಆಗುವ ಸ್ಥಳ, ದಯವಿಟ್ಟು ಕೆಳಗೆ ಇಳಿಯಿರಿ.ಹೀಗೆ ಮಾಡುವುದರಿಂದ ಏನು ಪ್ರಯೋಜನವಲ್ಲಾ, ನಿಮಗಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಪ್ರಧಾನಿ ಮೋದಿ ಯುವತಿಗೆ ಹೇಳಿದರು.

ಬಳಿಕ ಆ ಯುವತಿ ಟವರ್ ಮೇಲಿಂದ ಕೆಳಗೆ ಇಳಿದರು.

https://twitter.com/ANI/status/1723335266969006555?ref_src=twsrc%5Etfw%7Ctwcamp%5Etweetembed%7Ctwterm%5E1723335266969006555%7Ctwgr%5E7516a54470596d2043f1413065c1c5d5234308a0%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fnews%3Fmode%3Dpwaaction%3Dclick

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!