ಹೊಸದಿಗಂತ ಡಿಜಿಟಲ್ ಡೆಸ್ಕ್:
ನೆದರ್ಲೆಂಡ್ಸ್ ವಿರುದ್ಧದ ನಡೆದ ಪಂದ್ಯದಲ್ಲಿ ಪಾಕಿಸ್ತಾನ 81 ರನ್ ಗೆಲುವು ಕಂಡಿದೆ. ಅದರೊಂದಿಗೆ ಬಾಬರ್ ಅಜಮ್, ಭಾರತದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಗೆಲುವು ತಂದುಕೊಟ್ಟ ಮೊಟ್ಟಮೊದಲ ನಾಯಕ ಎನಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 49 ಓವರ್‌ಗಳಲ್ಲಿ 286 ರನ್‌ಗೆ ಆಲೌಟ್ ಆದರೆ, ಪ್ರತಿಯಾಗಿ ನೆದರ್ಲೆಂಡ್ಸ್ ತಂಡ 41 ಓವರ್‌ಗಳಲ್ಲಿ 205 ರನ್‌ಗೆ ಆಲೌಟ್ ಆಯಿತು. ಈ ಮೂಲಕ ವಿಶ್ವಕಪ್ ನಲ್ಲಿ ತನ್ನ ಮೊದಲ ಗೆಲುವು ಸಾಧಿಸಿತು.