World Earth Day : ಇನ್ನಾದ್ರೂ ಬುದ್ಧಿ ಕಲಿಯೋಣ್ವಾ? ಭೂಮಿಯನ್ನು ಉಳಿಸೋಕೆ ಇಷ್ಟು ಮಾಡಿ ಸಾಕು..

ಹೇಗಿದೆ ಬಿಸಿಲು? ಮನೆಯಿಂದ ಹೊರಗೆ ಕಾಲಿಡೋಕೂ ಇಷ್ಟವಾಗದೆ ಇರೋ ರೀತಿ ಇದೆ ಅಲ್ವಾ? ಇದೆಲ್ಲಾ ಒಂದೇ ಬಾರಿಗೆ ಆಗಿದ್ದಾ? ವಾತಾವರಣದಲ್ಲಿ ಇಷ್ಟೆಲ್ಲಾ ಬದಲಾವಣೆಗಳಾಗೋಕೆ ಕಾರಣ ಏನು?

ನಾವೇ…

ಹೌದು, ನಾವೇ ಕಾರಣ, ಇದೆಲ್ಲಾ ಏಕಾಏಕಿ ಬದಲಾವಣೆಗಳಲ್ಲ. ಎಷ್ಟೋ ವರ್ಷಗಳಿಂದ ಭೂಮಿಯನ್ನು ಹಾಳು ಮಾಡಲೇಬೇಕು ಎಂದು ಪಣತೊಟ್ಟಿರುವ ಮಾನವನ ʼಎಫರ್ಟ್ಸ್‌ʼನಿಂದಾಗಿ. ಭೂಮಿಯನ್ನು ಉಳಿಸಿಕೊಳ್ಳೋದು ಎಂದರೆ ನಮ್ಮನ್ನು ನಾವು ಉಳಿಸಿಕೊಳ್ಳೋದು ಎಂದೇ ಅರ್ಥ. ಭೂಮಿ ನಮ್ಮನ್ನು ಖುಷಿಯಾಗಿಟ್ಟಿದೆ. ನಾವು ಭೂಮಿಯನ್ನು ಖುಷಿಯಾಗಿಡಬೇಕು. ಅದಕ್ಕೆ ಹೀಗೆ ಮಾಡಿ..

ಎಲ್ಲ ವಸ್ತುಗಳನ್ನು ಕಡಿಮೆ ಬಳಕೆ ಮಾಡಿ, ಮರುಬಳಕೆ ಮಾಡಿ ಹಾಗೂ ರೀಸೈಕಲ್‌ ಮಾಡಿ. ಬೀದಿಗೆ ರಸ್ತೆಗೆ ಎಸೆಯುವ ಒಟ್ಟಾರೆ ವಸ್ತುಗಳು ಕಡಿಮೆಯಾಗಲಿ.

ಕೆರೆ ಹೂಳೆತ್ತೋದು, ಕ್ಲೀನಿಂಗ್‌ ಮಾಡೋದು ಇಂಥ ಕಾರ್ಯಕ್ರಮಗಳಿಗೆ ನೀವೇ ವಾಲೆಂಟಿಯರ್‌ ಆಗಿ ಹೋಗಿ.

ಪರಿಸರ ಚೆನ್ನಾಗಿ ಇಟ್ಟುಕೊಳ್ಳೋದಕ್ಕೆ ಎಲ್ಲರನ್ನು ಎಜುಕೇಟ್‌ ಮಾಡಿ.

ಕಡಿಮೆ ನೀರು ಬಳಕೆ ಮಾಡಿ

ದೀರ್ಘಕಾಲ ಬಾಳಿಕೆ ಬರುವ ವಸ್ತು, ಪದಾರ್ಥಗಳನ್ನು ಬಳಕೆ ಮಾಡಿ.

ಶಾಪಿಂಗ್‌ ಮಾಡುವಾಗ ಮನಸ್ಸಿಗೆ ಬಂದಿದ್ದೆಲ್ಲಾ ಖರೀದಿ ಮಾಡಬೇಡಿ.

ಮನೆಯ ಮುಂದೆ ಎರಡು ಮರ ಕಡ್ಡಾಯವಾಗಿರಲಿ.

ಮನೆಯಲ್ಲಿ ಗಿಡಗಳು, ಕೈಲಾದ ಕಡೆಯಲ್ಲೆಲ್ಲ ಗಿಡಗಳನ್ನು ನೆಡಬೇಕು.

ನಿಮ್ಮಮನೆಯಲ್ಲೇ ಗಾರ್ಡನ್‌ ಸೃಷ್ಟಿಸಿ, ನಿಮ್ಮ ತರಕಾರಿಗಳನ್ನು ನೀವೇ ಬೆಳೆದುಕೊಳ್ಳಿ.

ಎಲ್‌ಇಡಿ ಬಳಕೆ ಮಾಡಿ

ಪೆಟ್ರೋಲ್‌, ಡಿಸೆಲ್‌ ವಾಹನಗಳ ಬದಲು ಸೈಕಲ್‌ ಹಾಗೂ ಪಬ್ಲಿಕ್‌ ಟ್ರಾನ್ಸ್‌ಪೋರ್ಟ್‌ಗಳನ್ನು ಬಳಕೆ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!